ನಿಗೂಢ ನ್ಯೂಮೋನಿಯಾ; ಚೀನಾ ಹೇಳಿದ್ದೇನು?

masthmagaa.com:

ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಸೋಂಕು ಜಾಸ್ತಿಯಾಗ್ತಿದ್ದು, ಹೆಚ್ಚಾಗಿ ಮಕ್ಕಳಲ್ಲಿ ಹರಡ್ತಿದೆ ಅಂತ ವರದಿಯಾಗಿತ್ತು. ಈ ಸೋಂಕಿಗೆ ಸಂಬಂಧಿಸಿದಂತೆ ಅಧಿಕೃತ ವರದಿ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ WHO ಚೀನಾಗೆ ಸೂಚನೆ ಕೂಡ ನೀಡಿತ್ತು. ಇದೀಗ WHOಗೆ ಚೀನಾ ಉತ್ತರಿಸಿದ್ದು, ಈ ಸೋಂಕಿನಲ್ಲಿ ಯಾವ್ದೇ ರೀತಿಯ ಅಪರೂಪದ ವೈರಾಣು ಡಿಟೆಕ್ಟ್‌ ಆಗಿಲ್ಲ. ಚೀನಾದಲ್ಲಿ ಕೋವಿಡ್‌ಗೆ ಹೇರಲಾದ ನಿರ್ಬಂಧಗಳನ್ನ ತೆಗೆದ ನಂತರ, ಸಾಮಾನ್ಯವಾದ ಮೈಕೋಪ್ಲಾಸ್ಮಾ ನ್ಯುಮೋನಿಯಾ ವೈರಸ್‌ನಿಂದ ಈ ಉಸಿರಾಟದ ಖಾಯಿಲೆ ಹೆಚ್ಚಾಗಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply