ಸುಳ್ಳನ್ನು ಸಾವಿರ ಸಲ ಹೇಳಿದ್ರೆ ಸತ್ಯ ಆಗಲ್ಲ: ಚೀನಾ

masthmagaa.com:

ಕೊರೋನಾದ ಮೂಲ ಸಂಬಂಧ ಇನ್ನೂ ಕೂಡ ಅಮೆರಿಕ ಮತ್ತು ಚೀನಾ ಜಗಳ ಮುಂದುವರಿದಿದೆ. ಶನಿವಾರ ಅಮೆರಿಕದ ಗುಪ್ತಚರ ವಿಭಾಗ ಅಪ್​ಡೇಟೆಡ್ ವರದಿ ಬಿಡುಗಡೆ ಮಾಡಿತ್ತು. ಅದ್ರಲ್ಲಿ ಕೊರೋನಾ ವೈರಾಣು ಲ್ಯಾಬ್​ನಿಂದಲೇ ಹರಡಿದ್ದು ಅಂತ ಹೇಳಲಾಗಿತ್ತು. ಆದ್ರೆ ಅದಕ್ಕೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್​ಬಿನ್​, ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ಅವೈಜ್ಞಾನಿಕ ಮತ್ತು ಅದಕ್ಕೆ ಯಾವುದೇ ರೀತಿಯ ಮಹತ್ವ ಇಲ್ಲ. ಸುಳ್ಳನ್ನು ಸಾವಿರಾರು ಬಾರಿ ಹೇಳಿದ್ರೂ ಅದು ಸುಳ್ಳೇ.. ಸತ್ಯವಾಗಲ್ಲ ಅಂತ ಹೇಳಿದ್ದಾರೆ. ಜೊತೆಗೆ ಕೊರೋನಾದ ಮೂಲ ಹುಡುಕೋದು ಗಂಭೀರ ಮತ್ತು ಸಂಕೀರ್ಣವಾದ ವಿಚಾರವಾಗಿದೆ. ಅದು ವಿಶ್ವದ ಸಹಕಾರದ ಮೂಲಕ ಮಾತ್ರ ಸಾಧ್ಯ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply