ವುಹಾನ್‌ನಿಂದ ಖಾಲಿ ಕೈಯಲ್ಲಿ ವಪಾಸ್‌ ಹೊರಟ WHO!

masthmagaa.com:

ವಿಶ್ವ ಆರೋಗ್ಯ ಸಂಸ್ಥೆ ಚೀನಾದಲ್ಲಿ ಕೊರೋನಾದ ಮೂಲ ಹುಡುಕೋ ತನ್ನ ತನಿಖೆಯನ್ನು ಇವತ್ತು ಅಂತ್ಯಗೊಳಿಸಿದೆ. ಆದ್ರೆ ಈ ತಂಡಕ್ಕೆ ಕೊರೋನಾದ ಮೂಲಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಾರ್ಕೆಟ್, ಲ್ಯಾಬ್, ಆಸ್ಪತ್ರೆಗೆ ಸೇರಿದಂತೆ ಎಲ್ಲಾ ಕಡೆಗೆ ತಿರುಗಾಡಿ ಪರಿಶೀಲನೆ ನಡೆಸಿದ್ರೂ ಕೂಡ ಯಾವ ಪ್ರಾಣಿಗೆ ಮೊದಲ ಬಾರಿಗೆ ಕೊರೋನಾ ತಗುಲಿತು ಅನ್ನೋದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಲ್ಯಾಬ್​​ನಲ್ಲಿ ಕೊರೋನಾ ಹುಟ್ಟಿತ್ತು ಅನ್ನೋ ವಾದದನ್ನು ಕೂಡ ಈ ತಂಡ ನಿರಾಕರಿಸಿದೆ.

ಜೊತೆಗೆ ಕೊರೋನಾ ಚೀನಾಗೆ ಹೊರದೇಶದಿಂದ ಬಂದಿದೆ ಅನ್ನೋ ವಾದವನ್ನು ಸಮರ್ಥಿಸಿಕೊಂಡಿರೋ ತಂಡ, ಆಸ್ಟ್ರೇಲಿಯಾದಿಂದ ಬಂದ ಬೀಫ್​​ ಮೂಲಕ ಕೊರೋನಾ ಚೀನಾಗೆ ಹರಡಿಸಬಹುದು ಅಂತ ಹೇಳಿದೆ. ಈ ಮೂಲಕ ಇಷ್ಟು ದಿನ ತನಿಖೆ ನಡೆಸಿದ ಬಳಿಕವೂ ಸರಿಯಾಗಿ ಕೊರೋನಾದ ಮೂಲ ಪತ್ತೆಹಚ್ಚದೇ ವಾಪಸ್ ಹೊರಟಿದೆ. ಒಂದು ವರ್ಷ ಆದ್ಮೇಲೆ ಕೊರೋನಾ ಮೂಲ ಹುಡುಕೋಕೆ ಆಗುತ್ತಾ..? ಅದು ಚೀನಾದಂತ ದೇಶದಲ್ಲಿ..

-masthmagaa.com

Contact Us for Advertisement

Leave a Reply