ಟಿಬೆಟ್‌ನಿಂದ ಮಾಲ್ಡೀವ್ಸ್‌ಗೆ ನೀರು ಒದಗಿಸೋಕೆ ಮುಂದಾದ ಚೀನಾ!

masthmagaa.com:

ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ ಕುಡಿಯೋ ನೀರಿನ ಸಮಸ್ಯೆ ಎದುರಾಗಿದ್ದು ಅದಕ್ಕೆ ಪರಿಹಾರ ಕೊಡೋಕೆ ಡ್ರಾಗನ್‌ ಮುಂದಾಗಿದೆ. ಈ ವಿಚಾರವನ್ನ ಖುದ್ದು ಮಾಲ್ಡೀವ್ಸ್‌ ಸರ್ಕಾರ ಖಚಿತಪಡಿಸಿದೆ. ʻಟೆಬೆಟ್‌ನ ಹಿಮ ಪ್ರದೇಶದಿಂದ ಚೀನಾ ನಮಗೆ 1500 ಟನ್‌ ನೀರನ್ನ ಒದಗಿಸಲಿದೆ ಅಂತ ಹೇಳಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಾಲ್ಡೀವ್ಸ್‌ ಅಧ್ಯಕ್ಷ, ಚೀನಾ ಜೊತೆಗೆ ನೀರನ್ನ ಒದಗಿಸುವ ಡೀಲ್‌ ಮಾಡ್ಕೊಂಡಿದ್ರು. ಅದ್ರ ಭಾಗವಾಗಿ ಈ ಬೆಳವಣಿಗೆಯಾಗಿದೆ. ಸಧ್ಯ ಮಾಲ್ಡೀವ್ಸ್‌ಗೆ ಕುಡಿಯೋ ನೀರು ಹೆಚ್ಚಿನ ಪ್ರಮಾಣದಲ್ಲಿ ಇಷ್ಟು ದಿನ ಭಾರತದಿಂದಲೇ ಹೋಗ್ತಾ ಇತ್ತು. ಭಾರತದ ಎರಡು ಹಡಗುಗಳು ಮಾಲ್ಡೀವ್ಸ್‌ಗೆ ನೀರನ್ನ ಒದಗಿಸ್ತಿದ್ವು. INS ದೀಪಕ್ ಮತ್ತು INS ಸುಕನ್ಯಾ ಸುಮಾರು 2,000 ಟನ್‌ಗಳಷ್ಟು ನೀರನ್ನು ಒದಗಿಸಿದ್ವು. ಆದ್ರೆ ಮುಯಿಜು ಮಾಲ್ಡೀವ್ಸ್‌ನ ಅಧ್ಯಕ್ಷರಾದ್ಮೇಲೆ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಸೋ ಈಗ ಚೀನಾದಿಂದ ನೀರು ಪೂರೈಕೆ ಮಾಡ್ಕೊಳ್ಳೋಕೆ ಮಾಲ್ಡೀವ್ಸ್‌ ಮುಂದಾಗಿದೆ.

-masthmagaa.com

Contact Us for Advertisement

Leave a Reply