ಇದೇ ಮೊದಲ ಬಾರಿಗೆ ಅಂತರಿಕ್ಷಕ್ಕೆ ಹಾರಲಿದ್ದಾರೆ ಚೀನಿಯರು!

masthmagaa.com:

ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಚೀನಾ ತನ್ನ ಸಾಮಾನ್ಯ ನಾಗರಿಕರನ್ನು ಕಳುಹಿಸಲು ಮುಂದಾಗಿದೆ. ಮಂಗಳವಾರ ಅಂದ್ರೆ ನಾಳೆ ಚೀನಾ ನಿರ್ಮಿಸಿಕೊಂಡಿರೋ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತನ್ನ ಮೊದಲ ನಾಗರಿಕ ಗಗನಯಾತ್ರಿಯನ್ನು ಕಳುಹಿಸಲಿದೆ ಅಂತ ಚೀನಾ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇಲ್ಲಿಯವರೆಗೆ, ಬಾಹ್ಯಾಕಾಶಕ್ಕೆ ಕಳುಹಿಸಲಾದ ಎಲ್ಲಾ ಚೀನೀಯರು ಪೀಪಲ್ಸ್ ಲಿಬರೇಶನ್ ಆರ್ಮಿಯ ಭಾಗವಾಗಿದ್ದರು. ಆದ್ರೆ ಈಗ ಬಾಹ್ಯಾಕಾಶಕ್ಕೆ ತೆರಳಲಿರುವವರು ಯುನಿವರ್ಸಿಟಿಯಲ್ಲಿರೋ ಪ್ರಾಧ್ಯಾಪಕರುಗಳು ಅಂತ ಹೇಳಲಾಗಿದೆ. ಇನ್ನು ಮಂಗಳವಾರ ಬೆಳಗ್ಗೆ 9.31ಕ್ಕೆ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇವರೆಲ್ಲಾ ಟೇಕ್ ಆಫ್ ಆಗಲಿದ್ದಾರೆ ಅಂತ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಅಂದ್ಹಾಗೆ ಇವರು ಯಾಕಾಗಿ ಹೋಗ್ತಿದಾರೆ ಅಂತ ಗೊತ್ತಿಲ್ಲ. ಆದ್ರೆ ಚೀನಾ ಕೂಡ ಚಂದ್ರನ ಮೇಲೆ ನೆಲೆಯನ್ನು ನಿರ್ಮಿಸಲು ಯೋಚನೆ ಮಾಡಿದ್ದು 2029ರ ವೇಳೆಗೆ ಚಂದ್ರನ ಮೇಲೆ ಮನುಷ್ಯರನ್ನ ಇಳಿಸೋ ಯೋಜನೆ ಹಾಕೊಂಡಿದೆ. ಹೀಗಾಗಿ ಇದು ಆ ಕಾರ್ಯಾಚರಣೆ ಭಾಗ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply