ಜಮ್ಮು ಕಾಶ್ಮೀರ: ಜಿ20 ಸಭೆಗೆ ಚೀನಾ ಹಾಗೂ ಟರ್ಕಿ ಗೈರಾಗುವ ಸಾಧ್ಯತೆ

masthmagaa.com:

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಪ್ರವಾಸೋದ್ಯಮ ವರ್ಕಿಂಗ್‌ ಗ್ರೂಪ್‌ನ ಸಭೆಯಲ್ಲಿ ಚೀನಾ ಹಾಗೂ ಟರ್ಕಿ ಗೈರಾಗಲಿವೆ ಅಂತ ತಿಳಿದು ಬಂದಿದೆ. ಈ ಸಭೆ ಮೇ 22ರಿಂದ 24ರವರೆಗೆ ನಡೆಯಲಿದೆ. 2019ರ ಆಗಸ್ಟ್‌ನಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಆಯೋಜಿಸಲಾಗ್ತಿರುವ ಅತಿ ದೊಡ್ಡ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ಆದ್ರೆ ಈ ಸಭೆಯಲ್ಲಿ ಚೀನಾ, ಟರ್ಕಿ ಸೇರಿದಂತೆ ಇತರ ಕೆಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗ್ತಿದೆ. ಇನ್ನು ಜಮ್ಮು ಕಾಶ್ಮೀರದಲ್ಲಿ ಜಿ20 ಸಭೆ ನಡೆಸುತ್ತಿರೋದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಆದ್ರೆ ಪಾಕ್‌ ಮಾತಿಗೆ ಸೊಪ್ಪು ಹಾಕದ ಭಾರತ ಸಭೆ ನಡೆಸೋದಾಗಿ ಹೇಳಿತ್ತು. ಅಂದ್ಹಾಗೆ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ರಾಷ್ಟ್ರಗಳ ಸಭೆಗೆ ಇದೇ ರೀತಿ ಚೀನಾ ಗೈರಾಗಿತ್ತು. ಇದೀಗ ಈ ಸಭೆಗೆ ತನ್ನ ಆಪ್ತಸ್ನೇಹಿತ ಪಾಕಿಸ್ತಾನದ ಆಕ್ಷೇಪ ಇರುವ ಕಾರಣಕ್ಕೆ ಈ ಸಭೆಗೂ ಚೀನಾ ಗೈರಾಗಲಿದೆ ಅಂತ ಹೇಳಲಾಗ್ತಿದೆ. ಇನ್ನು ಟರ್ಕಿ ಕೂಡ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಮಾತಾಡಿತ್ತು. ಹೀಗಾಗಿ ಈ ಸಭೆಯಲ್ಲಿ ಟರ್ಕಿ ಭಾಗವಹಿಸೋದಿಲ್ಲ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply