ಬೆಂಕಿ ಜೊತೆ ಆಟ ಆಡ್ಬೇಡಿ! ಫಿಲಿಪೈನ್ಸ್‌ಗೆ ಚೀನಾದಿಂದ ಎಚ್ಚರಿಕೆ!

masthmagaa.com:

ತೈವಾನ್‌ ಚುನಾವಣೆಯಿಂದ ಹೊತ್ತಿ ಉರೀತಿರೋ ಚೀನಾ, ತನ್ನ ವಕ್ರ ದೃಷ್ಟಿಯನ್ನ ಇದೀಗ ತೈವಾನ್‌ ಇಂದ ಫಿಲಿಪೈನ್ಸ್‌ ಮೇಲೆ ಶಿಫ್ಟ್‌ ಮಾಡಿರೋ ಹಾಗಿದೆ. ʻಬೆಂಕಿ ಜೊತೆ ಆಟ ಆಡ್ಬೇಡಿʼ ಅಂತ ಚೀನಾ ಜನವರಿ 16 ರಂದು ಫಿಲಿಪೈನ್ಸ್‌ಗೆ ವಾರ್ನ್‌ ಮಾಡಿದೆ. ಜೊತೆಗೆ ಚೀನಾದಲ್ಲಿರೋ ಫಿಲಿಪೈನ್ಸ್‌ ರಾಯಭಾರಿಯನ್ನ ಕೂಡ ಕರೆಸಿಕೊಂಡಿದೆ. ಅಂದ್ಹಾಗೆ ವಿಷಯ ಏನಂದ್ರೆ, ಶತ್ರುವಿನ ಶತ್ರು ನಮಗೆ ಮಿತ್ರ ಅಂತ ಫಿಲಿಪೈನ್ಸ್‌ ಅಧ್ಯಕ್ಷ ಫರ್ಡಿನಾಂಡ್‌ ಮಾರ್ಕೋಸ್‌, ನೂತನ ತೈವಾನ್‌ ಅಧ್ಯಕ್ಷರಾಗಿ ಆಯ್ಕೆಯಾದ ಲೈ ಚಿಂಗ್‌-ಟೆ ಅವ್ರಿಗೆ ವಿಶ್‌ ಮಾಡಿದ್ರು. ಇದನ್ನ ಕಂಡು ಅರಗಿಸ್ಕೊಳ್ಳಿಕೆ ಆಗದ ಚೀನಾ ಫಿಲಿಪೈನ್ಸ್‌ ಮೇಲೆ ಕಿಡಿಕಾರಿದೆ. ಇದ್ರ ಬಗ್ಗೆ ರಿಯಾಕ್ಟ್‌ ಮಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್‌, ʻಫಿಲಿಪೈನ್ಸ್‌ ನೀಡಿರೋ ಹೇಳಿಕೆಯನ್ನ ಚೀನಾ ಬಹಳ ಸ್ಟ್ರಾಂಗ್‌ ಆಗಿ ವಿರೋಧಿಸುತ್ತೆ. ಇದ್ರ ಬಗ್ಗೆ ಫಿಲಿಪೈನ್ಸ್‌ ವಿವರಣೆ ನೀಡ್ಬೇಕು. ತೈವಾನ್‌ ವಿಚಾರದಲ್ಲಿ ಬೆಂಕಿ ಜೊತೆ ಆಡೋ ಸಾಹಸಕ್ಕೆ ಕೈ ಹಾಕ್ಬೇಡಿʼ ಅಂತ ವಾರ್ನ್‌ ಮಾಡಿದ್ದಾರೆ. ಚೀನಾದ ಈ ರಿಯಾಕ್ಷನ್‌ ಇಂದ ಉಭಯ ದೇಶಗಳ ನಡುವೆ ಇದೀಗ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗೋ ಲಕ್ಷಣ ಕಾಣ್ತಿವೆ. ಇನ್ನು ತೈವಾನ್‌ನ ನೂತನ ಅಧ್ಯಕ್ಷರಿಗೆ ಕೇವಲ ಫಿಲಿಪೈನ್ಸ್‌ ಅಧ್ಯಕ್ಷ ಮಾತ್ರವಲ್ದೇ ಬೌದ್ಧ ಧರ್ಮ ಗುರು ದಲೈ ಲಾಮಾ ಕೂಡ ವಿಶ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply