ತೈವಾನ್‌ ವಿವಾದ: ಅಮೆರಿಕವನ್ನ ಹೆದರಿಸಿದ ಚೀನಾ!

masthmagaa.com:

ತೈವಾನ್​ ಜೊತೆಗೆ ವ್ಯಾಪಾರ ಒಪ್ಪಂದ ಮಾಡ್ಕೊಳ್ಳಕ್ಕೆ ಹೊರಟಿರೋ ಅಮೆರಿಕಗೆ ಚೀನಾ ವಾರ್ನಿಂಗ್ ಕೊಟ್ಟಿದೆ. ಇತ್ತೀಚೆಗಷ್ಟೇ ತೈವಾನ್ ಜೊತೆ ವ್ಯಾಪಾರ ಒಪ್ಪಂದದ ಸಂಬಂಧ ಚೌಕಾಶಿ ನಡೀತಾ ಇದೆ. ಸದ್ಯದಲ್ಲೇ ಈ ಸಂಬಂಧ ಮಹತ್ವದ ಒಪ್ಪಂದವಾಗಲಿದೆ ಅಂತ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್ ಹೇಳಿದ್ರು. ಅದೂ ಅಲ್ದೆ ಇತ್ತೀಚೆಗಷ್ಟೇ ಅಮೆರಿಕ ಸೆನೆಟರ್​​ಗಳು ತೈವಾನ್​​ನ ತೈಪೇಗೆ ಭೇಟಿ ನೀಡಿ, ಏಳೂವರೆ ಲಕ್ಷ ಡೋಸ್ ಕೊರೋನಾ ಲಸಿಕೆ ನೀಡೋದಾಗಿ ಘೋಷಿಸಿದ್ರು. ಈ ಬಗ್ಗೆಯೂ ಚೀನಾ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್​, ತೈವಾನ್ ಜೊತೆಗೆ ಯಾವುದೇ ರೀತಿಯ ವಿನಿಮಯವನ್ನು ಇಟ್ಟುಕೊಳ್ಳಬೇಡಿ. ತೈವಾನ್ ವಿಚಾರದಲ್ಲಿ ಹುಷಾರಾಗಿರಿ ಅಂತ ಎಚ್ಚರಿಸಿದ್ಧಾರೆ. ಅಂದಹಾಗೆ ಚೀನಾಗೆ ಹತ್ತಿರದಲ್ಲಿರೋ ದ್ವೀಪ ತೈವಾನ್ ನನಗೇ ಸೇರಿದ್ದು ಅಂತ ಚೀನಾ ವಾದಿಸುತ್ತಾ ಬಂದಿದ್ದು, ತೈವಾನ್​​ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸ್ಥಾನಮಾನ ಸಿಗದಂತೆಯೂ ನೋಡಿಕೊಳ್ತಿದೆ. ಇತ್ತ ಅಮೆರಿಕ 1979ರಿಂದ ತೈವಾನ್ ಜೊತೆಗೆ ರಾಜತಾಂತ್ರಿಕ ಸಂಬಂಧ ಹೊಂದಿದ್ದು, ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದೆ.

-masthmagaa.com

Contact Us for Advertisement

Leave a Reply