ಮ್ಯಾಕ್ರಾನ್‌ ಭಾರತ ಭೇಟಿಯ ಬೆನ್ನಲ್ಲೇ ಫ್ರಾನ್ಸ್‌ಗೆ ಚೀನಾದಿಂದ ಸಂದೇಶ!

masthmagaa.com:

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಭಾರತಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ಇದೀಗ ಚೀನಾ ಫ್ರಾನ್ಸ್‌ಗೆ ನೈಸ್‌ ಮಾಡೋ ಕೆಲಸ ಶುರುಹಚ್ಕೊಂಡಿದೆ. ಚೀನಾ-ಫ್ರಾನ್ಸ್‌ ಸಂಬಂಧ ಇನ್ನಷ್ಟು ಸ್ಟ್ರಾಂಗ್‌ ಮಾಡೋಕೆ ಪ್ಲಾನ್‌ ಮಾಡ್ಕೊಂಡ್ಹಾಗಿದೆ. ಅದೇನೋ ಕೋಇನ್ಸಿಡೆನ್ಸ್‌ ಅನ್ನೋ ಹಾಗೇ ಮ್ಯಾಕ್ರಾನ್‌ ಭಾರತ ಭೇಟಿ ಹಾಗೂ ಚೀನಾ-ಫ್ರಾನ್ಸ್‌ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷಗಳು ತುಂಬಿರೋ ಗಳಿಗೆ ಒಟ್ಟಾಗಿತ್ತು. ತಮ್ಮ ಸಂಬಂಧಕ್ಕೆ 60 ವರ್ಷಗಳು ತುಂಬಿರೋ ವಿಚಾರವಾಗಿ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಫ್ರಾನ್ಸ್‌ ಅಧ್ಯಕ್ಷರಿಗೆ ಮೆಸೇಜ್‌ ಕಳಿಸಿದ್ದಾರೆ. ʻಇಂದಿನ ಜಗತ್ತು ಮತ್ತೊಮ್ಮೆ ನಿರ್ಣಾಯಕ ಕವಲುದಾರಿಯಲ್ಲಿದೆ ಅಂದ್ರೆ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಆದ್ರಿಂದ ಫ್ರಾನ್ಸ್‌ ಮತ್ತು ಚೀನಾ ಜೊತೆಗೂಡಿ ಮಾನವ ಅಭಿವೃದ್ಧಿಗಾಗಿ, ಶಾಂತಿ, ಸಮೃದ್ಧಿ ಮತ್ತು ಭದ್ರತೆಯ ದಾರಿಯನ್ನ ವಿಶ್ವಕ್ಕೆ ತೋರಿಸ್ಬೇಕುʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply