masthmagaa.com:

ಕಳೆದ ವರ್ಷ ಲಡಾಖ್ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಯ ಯೋಧರು ಕಲ್ಲು, ದೊಣ್ಣೆ, ರಾಡ್​ಗಳಿಂದ ಹೊಡೆದಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಅದಾಗಿ 4 ತಿಂಗಳ ಬಳಿಕ, ಗಾಲ್ವಾನ್ ಕಣಿವೆಯಿಂದ ಸುಮಾರು 1,500 ಕಿಲೋ ಮೀಟರ್ ದೂರದಲ್ಲಿರೋ ಮುಂಬೈನಲ್ಲಿ ಅಕ್ಟೋಬರ್ 12ರಂದು ದಿಢೀರ್ ಅಂತ ಕರೆಂಟ್​ ಕೈಕೊಟ್ಟಿತ್ತು. ಕರೆಂಟ್ ಇಲ್ಲದೆ ರೈಲು ಸಂಚಾರ ನಿಂತು ಹೋಗಿತ್ತು, ಷೇರ್ ಮಾರ್ಕೆಟ್​ ಬಂದ್ ಆಗಿತ್ತು, ಕೊರೋನಾ ಹಾಟ್​ಸ್ಪಾಟ್​ ರೀತಿ ಆಗಿದ್ದ ಮುಂಬೈನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೆಲಸ ಮಾಡುತ್ತಿರೋಕೆ ಜನರೇಟರ್​ಗಳನ್ನ ಆನ್ ಮಾಡಬೇಕಾಗಿತ್ತು.. ಒಂದ್​ ರೀತಿ 2 ಕೋಟಿ ಜನರಿರುವ ಮುಂಬೈ ನಗರ ಕತ್ತಲೆಗೆ ಜಾರಿತ್ತು. ಆದ್ರೀಗ ಗಡಿಯಲ್ಲಿ ಚೀನಾ ಜೊತೆ ನಡೆದ ಗಲಾಟೆಗೂ, ಮುಂಬೈನಲ್ಲಿ ಕರೆಂಟ್​​ ಕೈಕೊಟ್ಟಿದ್ದಕ್ಕೂ ಸಂಬಂಧವಿತ್ತು ಅಂತ ಹೇಳಲಾಗ್ತಿದೆ. ಗಡಿಯಲ್ಲಿ ಸಂಘರ್ಷ ನಡೀತಿರುವಾಗಲೇ ಚೀನಾ ಭಾರತದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತಾ ಅನ್ನೋ ಅನುಮಾನ ದಟ್ಟವಾಗ್ತಿದೆ. ಭಾರತದ ಪವರ್​ ಗ್ರಿಡ್​​ಗಳನ್ನ ಹ್ಯಾಕ್ ಮಾಡಿದ್ದ ಚೀನೀ ಹ್ಯಾಕರ್​ಗಳು ದೇಶದ ಕರೆಂಟ್​ ಸಪ್ಲೈಯನ್ನ ಮ್ಯಾನೇಜ್ ಮಾಡೋ ಕಂಟ್ರೋಲ್​ ಸಿಸ್ಟಂಗೆ ವೈರಸ್​ ಬಿಟ್ಟಿದ್ರು ಅನ್ನೋ ವರದಿ ಈಗ ಕೇಂದ್ರ ಸರ್ಕಾರದ ಕೈ ಸೇರಿದೆ. ಈ ಮೂಲಕ ಗಡಿಯಲ್ಲೇನಾದ್ರೂ ಭಾರತ ಜಾಸ್ತಿ ಶಕ್ತಿ ಪ್ರದರ್ಶಿಸಿದ್ರೆ ಇಡೀ ದೇಶವನ್ನೇ ಕತ್ತಲೆ ಕೋಣೆ ಮಾಡ್ತೀವಿ ಅನ್ನೋ ವಾರ್ನಿಂಗ್ ಚೀನಾ ಕೊಟ್ಟಿತ್ತು ಅಂತಾನೇ ಈ ವರದಿಯಲ್ಲಿ ಹೇಳಲಾಗ್ತಿದೆ. ಅಮೆರಿಕದ ಮೆಸಾಚುಸೆಟ್ಸ್​ನ ರೆಕಾರ್ಡೆಡ್​ ಫ್ಯೂಚರ್ ಅನ್ನೋ ಕಂಪನಿ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಗೊತ್ತಾಗಿದೆ. ಚೀನಾ ಸರ್ಕಾರಿ ಪ್ರಾಯೋಜಿತ ರೆಡ್​ ಈಕೋ (Red Echo) ಅನ್ನೋ ಗುಂಪು ಈ ಕಿತಾಪತಿ ಮಾಡಿರ್ಬೋದು ಅಂತ ವರದಿಯಲ್ಲಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಚೀನಿ ಹ್ಯಾಕರ್​ಗಳು ಬಿಟ್ಟಿದ್ದ ವೈರಸ್​ಗಳಲ್ಲಿ ಸಾಕಷ್ಟು ವೈರಸ್​ಗಳು ಆಕ್ಟಿವೇಟ್ ಆಗಿರಲಿಲ್ಲವಂತೆ. ಒಂದ್ವೇಳೆ ಎಲ್ಲವೂ ಆಕ್ಟಿವೇಟ್ ಆಗಿದ್ರೆ ಬಹುಶಃ ಇಡೀ ಮಹಾರಾಷ್ಟ್ರ ಅಥವಾ ಇಡೀ ದೇಶದಲ್ಲೇ ಕರೆಂಟ್​ ಸಮಸ್ಯೆ ಉಂಟಾಗ್ತಿತ್ತೇನೋ. ಈ ಚೀನಾದವರು ಏನ್ ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ಇದೊಂದು ಎಕ್ಸಾಂಪಲ್. ರೆಕಾರ್ಡೆಡ್​ ಫ್ಯೂಚರ್ ಕಂಪನಿಯ ಈ ಅಧ್ಯಯನ ವರದಿ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಸೈಬರ್ ಡಿಪಾರ್ಟ್​ಮೆಂಟ್​ನಿಂದ ವರದಿ ಕೇಳಿದೆ.

-masthmagaa.com

Contact Us for Advertisement

Leave a Reply