ಚೀನಾಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ!

masthmagaa.com:

ಇತ್ತೀಚೆಗೆ ಚೀನಾಗೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಇದೀಗ ಚೀನಾಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಅಂತ ತಿಳಿದು ಬಂದಿದೆ. ಕೊರೊನಾ ಮೊದಲು 2019ಕ್ಕೆ ಹೋಲಿಸಿದರೆ 2023ರ ಮೊದಲ ತ್ರೈಮಾಸಿಕದಲ್ಲಿ ಅದರ ಕಾಲು ಭಾಗದ ಸಂಖ್ಯೆಯಷ್ಟು ವಿದೇಶಿ ಪ್ರವಾಸಿಗರು ಮಾತ್ರ ಚೀನಾಗೆ ಭೇಟಿ ನೀಡಿದ್ದಾರೆ. ಬೀಜಿಂಗ್, ಶಾಂಘೈ ಸೇರಿದಂತೆ ಪ್ರಮುಖ ನಗರಗಳಿಗೆ 2023ರ ಮೊದಲ ತ್ರೈಮಾಸಿಕದಲ್ಲಿ ಕೇವಲ 52 ಸಾವಿರ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 2019ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು 37 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದರು. ಅಂದ್ಹಾಗೆ ಪ್ರಮುಖವಾಗಿ ಯೂರೋಪ್, ಅಮೆರಿಕ, ಜಪಾನ್ ಮತ್ತು ಕೊರಿಯಾದ ಪ್ರವಾಸಿಗರು ಚೀನಾಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಪ್ರವಾಸಿಗರು ಚೀನಾದಲ್ಲಿ ಮೃತಪಟ್ಟಿರೋದು ಕೂಡ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಒಂದು ಕಾರಣ ಎನ್ನಲಾಗಿದೆ. ಇನ್ನೊಂದ್‌ ಕಡೆ ಚೀನಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆಯಾಗಿದ್ದು, ಸಾವಿರಾರು ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆದ್ರೆ ಚೀನಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಸುಡು ಬಿಸಿಲಿದ್ದು, ಬೆಳೆಗಳು ನಾಶವಾಗಿ ಬರಗಾಲ ಉಂಟಾಗಿದೆ. ಅಂದ್ರೆ ಏಕಕಾಲದಲ್ಲಿ ಚೀನಾದ ಒಂದು ಕಡೆ ಭಾರಿ ಮಳೆ ಸುರಿತಿದ್ರೆ ಇನ್ನೊಂದ್‌ ಕಡೆ ಬರಗಾಲ ತಟ್ಟಿದ್ದು, ಒಟ್ಟಿನಲ್ಲಿ ಚೀನಾ ಭಾರಿ ತೊಂದ್ರೆಗೆ ಸಿಲುಕಿದೆ ಎನ್ನಲಾಗಿದೆ. ಅಷ್ಟೆ ಅಲ್ದೆ ಆರ್ಥಿಕತೆಯಲ್ಲೂ ಕುಂಟಿತ ಬೆಳವಣಿಗೆ ಫೇಸ್‌ ಮಾಡ್ತಿರೋ ಚೀನಾಗೆ ಎಲ್ಲವನ್ನೂ ನಿಭಾಯಿಸೋದೆ ಒಂದು ದೊಡ್ಡ ತಲೆನೋವಾಗಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply