ಕಾಣೆಯಾಗಿದ್ದ ಚೀನಾ ಮಾಜಿ ವಿದೇಶಾಂಗ ಸಚಿವ ರಾಜಿನಾಮೆ!

masthmagaa.com:

ಕಳೆದ ವರ್ಷ ಜೂನ್‌ನಿಂದ ಕಣ್ಮರೆಯಾದ…ಪಬ್ಲಿಕ್‌ನಲ್ಲಿ ಕಾಣಿಸಿಕೊಳ್ಳದ ಚೀನಾದ ಮಾಜಿ ವಿದೇಶಾಂಗ ಸಚಿವರಾದ ಕ್ವಿನ್‌ ಗ್ಯಾಂಗ್‌ ಕುರಿತು ಇದೀಗ ಹೊಸ ಸುದ್ದಿ ಚೀನಾ ಕಡೆಯಿಂದ ಕೇಳಿ ಬಂದಿದೆ. ಕ್ವಿನ್‌ ಗ್ಯಾಂಗ್‌ ಅವ್ರು ಈಗ ತಮ್ಮ ಸಂಸದೀಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ ಅಂತ ಚೀನಾದ ಮೀಡಿಯಾಗಳು ಫೆಬ್ರುವರಿ 27 ರಂದು ರಿಪೋರ್ಟ್‌ ಮಾಡಿವೆ. ಅಂದ್ಹಾಗೆ ಕಳೆದ ವರ್ಷ ಜುಲೈ ತಿಂಗಳಲ್ಲಿ ಕ್ವಿನ್‌ ಅವ್ರನ್ನ ಚೀನಾದ ವಿದೇಶಾಂಗ ಸ್ಥಾನದಿಂದ ತೆಗದು ಹಾಕಲಾಯ್ತು. ಇವ್ರ ಬದಲಿಗೆ ವಾಂಗ್‌ ಯಿ ಅವ್ರನ್ನ ರಿಪ್ಲೇಸ್‌ ಮಾಡಲಾಯ್ತು. ನಂತ್ರ ಕ್ವಿನ್‌ ಅವ್ರನ್ನ ಅಕ್ಟೋಬರ್‌ ತಿಂಗಳಲ್ಲಿ ಚೀನಾದ ಕ್ಯಾಬಿನೆಟ್‌ಯಿಂದಲೂ ಹೊರ ಹಾಕಲಾಯ್ತು. ಆದ್ರೆ ಚೀನಾ ಸರ್ಕಾರ ಮಾತ್ರ ಇದ್ಯಾವ್ದಕ್ಕೂ ಕಾರಣಗಳನ್ನ ಕೊಟ್ಟಿಲ್ಲ. ಇದೀಗ ಸಡನ್‌ ಆಗಿ ಕ್ವಿನ್‌ ಅವ್ರು ತಮ್ಮ ಸಂಸದೀಯ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರೋದು ಸುದ್ದಿಯಾಗಿದೆ.

-masthmagaa.com

Contact Us for Advertisement

Leave a Reply