masthmagaa.com:

ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ನಡೀತಿರೋ ಸಂಘರ್ಷ ಸದ್ಯಕ್ಕೆ ಶಮನವಾಗೋ ಲಕ್ಷಣ ಕಾಣ್ತಿದೆ. ಯಾಕಂದ್ರೆ ಕಳೆದ ವರ್ಷ ಉಭಯ ದೇಶದ ಯೋಧರು ಹೊಡೆದಾಡಿಕೊಂಡಿದ್ದ ಪ್ಯಾಂಗಾಂಗ್​ ಸೋ ಲೇಕ್​​ನ ಉತ್ತರ ಮತ್ತು ದಕ್ಷಿಣ ದಡದಲ್ಲಿ ಎರಡೂ ದೇಶಗಳು ಇವತ್ತು ತಮ್ಮ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳುತ್ತಿವೆ ಅಂತ ಚೀನಾದ ರಕ್ಷಣಾ ಇಲಾಖೆ ಹೇಳಿದೆ. ಹೀಗಂತ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ನಡೆದ 9ನೇ ಸುತ್ತಿನ ಮಿಲಿಟರಿ ಕಮಾಂಡರ್ ಹಂತದ ಮಾತುಕತೆ ವೇಳೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಈಗ ಡಿಸ್​ಎಂಗೇಜ್​ಮೆಂಟ್​ ನಡೀತಿದೆ. ಈ ಎಲ್ಲಾ ಗಲಾಟೆಗಳ ಮೂಲ ಇರೋದು ಫಿಂಗರ್ ಏರಿಯಾದಲ್ಲಿ. ಪ್ಯಾಂಗಾಂಗ್​ ಸೋ ಲೇಕ್​​ನ ದಡದಲ್ಲಿ ಹರಡಿಕೊಂಡಿರೋ ಈ ಗುಡ್ಡಗಳ ಸಾಲೇ ಫಿಂಗರ್​​ ಏರಿಯಾ. ಒಂದೊಂದು ಗುಡ್ಡ ಒಂದೊಂದು ಫಿಂಗರ್​​. ಡಿಸ್​ಎಂಗೇಜ್ಮೆಂಟ್​ ಪ್ಲಾನ್​ ಪ್ರಕಾರ ಫಿಂಗರ್​ ಏರಿಯಾದಲ್ಲಿ ಚೀನಾ ಫಿಂಗರ್​​ 8ಕ್ಕೆ ವಾಪಸ್​ ಹೋಗುತ್ತೆ. ಇದಕ್ಕೆ ಪ್ರತಿಯಾಗಿ ಭಾರತ ಫಿಂಗರ್​​ 2 ಮತ್ತು 3ರ ನಡುವೆ ಇರೋ ಧನ್​ ಸಿಂಗ್ ಥಾಪಾ ಪೋಸ್ಟ್​ಗೆ ವಾಪಸ್​ ಬರಬೇಕು. ಚೀನಾ-ಭಾರತ ಎರಡೂ ಕಡೆಯವರು ಫಿಂಗರ್​ 8ರಿಂದ ಫಿಂಗರ್​​​​ 3 ಮಧ್ಯದ ಜಾಗದಲ್ಲಿ ಗಸ್ತು ತಿರುಗಬಾರದು. ವಿವಿಧ ಹಂತಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತೆ ಅಂತ ರಕ್ಷಣಾ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಭಾರತದ ಪ್ರಕಾರ ಫಿಂಗರ್​ 8 ಲೈನ್​ ಆಫ್ ಆಕ್ಚುವಲ್ ಕಂಟ್ರೋಲ್ (LAC). ಆದ್ರೆ 2020ರ ಮೇ ತಿಂಗಳಲ್ಲಿ ಚೀನಾ ಒಟ್ಟು 8 ಕಿಲೋ ಮೀಟರ್​ ಒಳ ಪ್ವೇಶಿಸಿ ಫಿಂಗರ್​ 4ರ ಸಮೀಪ ಬಂದಿತ್ತು. ಇದರಿಂದ ಘರ್ಷಣೆ ಆರಂಭ ಆಗಿತ್ತು.

-masthmagaa.com

Contact Us for Advertisement

Leave a Reply