ಚೀನಾ ವಶದಲ್ಲಿರೋ ನಮ್ಮ ಜಾಗದಲ್ಲಿ ಸೇತುವೆ ನಿರ್ಮಾಣ: ಭಾರತ

masthmagaa.com:

ಲಡಾಖ್​ನ ಪ್ಯಾಂಗಾಂಗ್ ಲೇಕ್​ ಬಳಿ ಚೀನಾ ಸೇತುವೆ ನಿರ್ಮಾಣ ಮಾಡ್ತಿದೆ ಅಂತ ಇತ್ತೀಚೆಗೆ ವರದಿಯಾಗಿತ್ತು. ಆದ್ರೆ ಚೀನಾ ಸೇತುವೆ ನಿರ್ಮಾಣ ಮಾಡ್ತಿರೋ ಜಾಗ ಕಳೆದ 60 ವರ್ಷಗಳಿಂದ ಚೀನಾದ ಅಕ್ರಮ ವಶದಲ್ಲಿದೆ ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಜೊತೆಗೆ ಕೇಂದ್ರ ಸರ್ಕಾರ ಈ ವಿಚಾರವನ್ನ ಕ್ಲೋಸ್ಲಿ ಮಾನಿಟರ್ ಮಾಡ್ತಿದೆ. ನಮ್ಮ ಭದ್ರತಾ ಹಿತಾಸಕ್ತಿಗಳನ್ನ ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಅಂತಾನೂ ಹೇಳಿದೆ. ಇನ್ನು ಅರುಣಾಚಲ ಪ್ರದೇಶದ ಕೆಲವೊಂದು ಪ್ರದೇಶಗಳಿಗೆ ಚೀನಾ ಹೆಸರಿಡ್ತಿದೆ ಅಂತ ವರದಿಯಾಗಿತ್ತು. ಇದು ತಮ್ಮದಲ್ಲದ ಪ್ರದೇಶಕ್ಕೆ ಹೆಸರಿಡ್ತಿರೋ ಚೀನಾ ನಡೆ ಹಾಸ್ಯಾಸ್ಪದ. ಈ ಬಗ್ಗೆ ನಮ್ಮ ನಿಲುವನ್ನ ತಿಳಿಸಿದ್ದೀವಿ. ಹೀಗೆ ಮಾಡೋ ಬದಲು ಭಾರತ-ಚೀನಾ ಗಡಿಯಲ್ಲಿಯರೋ ಫ್ರಿಕ್ಷನ್​ ಪಾಯಿಂಟ್​​ಗಳಲ್ಲಿರೋ ವಿವಾದವನ್ನ ಬಗೆಹರಿಸಿಕೊಳ್ಳಲು ಪ್ರಯತ್ನ ಪಡ್ಬೇಕು ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply