ಪ್ರಧಾನಿ ಭದ್ರತೆಗಾಗಿ 10 ವರ್ಷಕ್ಕಿಂತ ಹಳೇ ಡಿಸೇಲ್‌ ವಾಹನ ಬಳಕೆಗೆ ನಕಾರ!

masthmagaa.com:

ಪ್ರಧಾನಿಯವ್ರ ಭದ್ರತೆಯ ಉದ್ದೇಶಕ್ಕಾಗಿ ವಿಶೇಷ ಭದ್ರತಾ ಪಡೆ(SPG)ಯ 3 ಸಶಸ್ತ್ರ ಚಾಲಿತ ಡಿಸೇಲ್‌ ವಾಹನಗಳ ನೊಂದಣಿ ವಿಸ್ತರಣೆಯ ಪ್ರಸ್ತಾವವನ್ನ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತಿರಸ್ಕರಿಸಿದೆ. ದಿಲ್ಲಿಯ NCR ರಸ್ತೆಗಳಲ್ಲಿ 10ವರ್ಷಕ್ಕಿಂತ ಹಳೆಯ ಡಿಸೇಲ್‌ ವಾಹನಗಳು ಓಡಾಟಕ್ಕೆ ನಿಷೇಧ ಹೇರಿ 2018ರಲ್ಲಿ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಇದೀಗ ಆ ಆದೇಶವನ್ನ ಉಲ್ಲೇಖಿಸಿ ರಾಷ್ಟ್ರೀಯ ಹಸಿರು ಮಂಡಳಿ ಡಿಸೇಲ್‌ ವಾಹನಗಳ ನೊಂದಣಿ ವಿಸ್ತರಣೆಗೆ ನಿರಾಕರಿಸಿದೆ.

-masthmagaa.com

Contact Us for Advertisement

Leave a Reply