ಲಾಕ್​ಡೌನ್ ಬೇಕೋ, ಬೇಡ್ವೋ ಅನ್ನೋದನ್ನ ಜನರೇ ನಿರ್ಧರಿಸಲಿ!

masthmagaa.com:

ಕೊರೋನಾ ಹಾವಳಿ ಹೆಚ್ಚಾಗಿರೋ ನಮ್ಮ ಪಕ್ಕದ ಮಹಾರಾಷ್ಟ್ರದಲ್ಲಿ ಜನ ರೂಲ್ಸ್ ಫಾಲೋ ಮಾಡದಿದ್ರೆ ಮತ್ತೆ ಲಾಕ್​ಡೌನ್​ ಹೇರಲಾಗುತ್ತೆ ಅಂತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ. ‘ಈಗ ನನ್ನ ಎದುರಿಗೋ ಪ್ರಶ್ನೆ ಏನಂದ್ರೆ, ನಾವು ಲಾಕ್​ಡೌನ್ ಹೇರಬೇಕಾ? ಅನ್ನೋದು. ಯಾರಿಗೆ ಲಾಕ್​ಡೌನ್ ಬೇಡವೋ ಅವರು ನಿಯಮಗಳನ್ನ ಪಾಲಿಸಿ, ಮಾಸ್ಕ್ ಧರಿಸಿ, ಕೈಗಳನ್ನ ತೊಳೀತಾ ಇರಿ, ದೈಹಿಕ ಅಂತರ ಕಾಪಾಡಿ. ಯಾರಿಗೆ ಲಾಕ್​ಡೌನ್ ಬೇಕೋ ಅವರು ಈ ನಿಯಮಗಳನ್ನ ಉಲ್ಲಂಘಿಸುತ್ತಾರೆ. ನೋಡೋಣ ಯಾರಿಗೆ ಲಾಕ್​ಡೌನ್​ ಬೇಕು, ಯಾರಿಗೆ ಬೇಡ ಅಂತ. ರೂಲ್ಸ್ ಫಾಲೋ ಮಾಡಿ ಹೊಸ ಲಾಕ್​ಡೌನ್​ ಜಾರಿಯಾಗದಂತೆ ನೋಡಿಕೊಳ್ಳಿ. ಈ ವಿಚಾರದಲ್ಲಿ ನಾನು ಕ್ಲಿಯರ್ ಆಗಿದ್ದೇನೆ. ಎರಡನೇ ಅಲೆ ಇನ್ನೂ ಬಂದಿಲ್ಲ. ಬಾಗಿಲಲ್ಲಿ ಬಂದು ನಿಂತಿದೆ. ಮುಂದಿನ ಒಂದೆರಡು ವಾರಗಳಲ್ಲಿ ಅದು ಗೊತ್ತಾಗುತ್ತೆ’ ಅಂತ ಉದ್ಧವ್ ಠಾಕ್ರೆ ಹೇಳಿದ್ರು. ಇದರ ಜೊತೆಗೆ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಜನ ಸೇರೋದು, ಮೆರವಣಿಗೆ, ಮೋರ್ಚಾ, ಸಾರ್ವಜನಿಕ ಪ್ರತಿಭಟನೆ ನಡೆಸೋದನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ್ದಾರೆ. ಅಂದ್ಹಾಗೆ ಮಹಾರಾಷ್ಟ್ರದ ಅಮ್ರಾವತಿ ಜಿಲ್ಲೆಯಲ್ಲಿ ಇವತ್ತು ಸಂಜೆಯಿಂದ ಒಂದು ವಾರ ಕಾಲ್ ಲಾಕ್​ಡೌನ್ ಶುರುವಾಗಲಿದೆ. ಪುಣೆಯಲ್ಲಿ ಇವತ್ತಿನಿಂದ ನೈಟ್​ ಕರ್ಫ್ಯೂ ಜಾರಿಯಾಗ್ತಿದೆ.

-masthmagaa.com

Contact Us for Advertisement

Leave a Reply