ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ: ಗ್ಯಾಂಗ್ಸ್ಟಾರ್ಸ್ ಗೆ ಅಂಕರ್ ಆದ ಸೃಜನ್ ಲೋಕೇಶ್!

masthmagaa.com:

ಟಾಕಿಂಗ್‌ ಸ್ಟಾರ್‌ ಅಂತಾನೇ ಫೇಮಸ್‌ ಆಗಿರುವ ಸೃಜನ್‌ ಲೋಕೆಶ್‌ ಮಜಾ ಟಾಕೀಸ್‌ ಮೂಲಕ ಮನೆ ಮಾತಾಗಿದ್ರು. ಯಾರ್‌ ಏನೇ ಮಾತಾಡಿದ್ರು ಕೌಂಟರ್‌ ಮೇಲೆ ಕೌಂಟರ್‌ ಕೊಡೋ ಸೃಜನ್‌ ಅವರು ಕಾಮಿಡಿ ಶೋ ಆದ ಮೇಲೆ ರಾಜರಾಣಿ ಶೋ ದಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ರು. ನಂತರ ಬಂದಂತ ರಾಜ ರಾಣಿ ಸೀಸನ್‌ 2 ದಲ್ಲೂ ಕೂಡ ಜಡ್ಜ್‌ ಆಗಿ ಎಲ್ಲರಿಗೂ ಕೌಂಟರ್‌ ಕೋಡ್ತಾ ಇದ್ದಂತ ಇವರು ಎಲ್ಲರ ಕಾಲೆಳ್ಯೋದ್ರಲ್ಲಿ ಎತ್ತಿದ ಕೈ ಅಂತಾನೇ ಹೇಳಬೋದು.

ಜಡ್ಜ್‌ ಆಗಿದ್ದ ಸೃಜನ್‌ ಈಗ ಆಂಕರ್‌ ಆಗಿ ಮತ್ತೊಂದು ಶೋ ಮೂಲಕ ಜನರನ್ನ ನಗಿಸೋಕೆ ಬರ್ತಾ ಇದ್ದಾರೆ. “ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್” ಎಂಬ ಹೆಸರನ್ನ ಇಟ್ಕೊಂಡು ಈ ಶೋ ಮಾಡಲಾಗ್ತಾ ಇದೆ. ಸೃಜನ್‌ ಅವರ ಆಂಕರಿಂಗ್‌ ಈ ಶೋಗೆ ಮತ್ತೂ ಒಳ್ಳೆ ಮಜಾ ಕೊಡೋ ಈ ಪ್ರೊಗ್ರಾಮ್‌ ನ ಪ್ರೋಮೋ ವನ್ನ ಕಲರ್ಸ್‌ ಕನ್ನಡ ತಮ್ಮ ಆಫಿಷಿಯಲ್‌ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ‘ಕಲರ್ಸ್ ಸಂಸಾರಗಳ ಕಲರ್​ಫುಲ್ ಹಣಾಹಣಿ… ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’ ಎಂದು ಈ ಪ್ರೋಮೋಗೆ ಕ್ಯಾಪ್ಶನ್ ಕೊಡಲಾಗಿದೆ. ಇದು ರಿಯಾಲಿಟಿ ಗೇಮ್​ಶೋ. ‘ಲಕ್ಷ್ಮೀ ಬಾರಮ್ಮ’, ‘ತ್ರಿಪುರ ಸುಂದರಿ’, ‘ಭಾಗ್ಯ ಲಕ್ಷ್ಮೀ’ ಮೊದಲಾದ ಸೀರಿಯಲ್​ಗಳ ಕಾಲವಿದರು ರಿಯಾಲಿಟಿ ಗೇಮ್​ ಶೋನಲ್ಲಿ ಭಾಗಿ ಆಗಲಿದ್ದಾರೆ. ಈ ಪ್ರೋಗ್ರಾಮ್‌ ಯಾವ್‌ ರೀತಿ ಇರಬಹುದು ಅಂತ ಜನರಲ್ಲಿ ಕ್ಯುರಿಯಾಸಿಟಿ ಜಾಸ್ತಿ ಆಗ್ತಾ ಇದೆ. ಯಾವಾಗ ಪ್ರೋಗ್ರಾಮ್‌ ಸ್ಟಾರ್ಟ್‌ ಆಗತ್ತೆ ಅಂತ ಡೇಟ್‌ ಹೇಳೊದೊಂದೇ ಬಾಕಿ ಇದೆ.

-masthmagaa.com

Contact Us for Advertisement

Leave a Reply