ಕೇರಳದಲ್ಲಿ ಬಿಗಡಾಯಿಸ್ತಿದೆ ಕೋವಿಡ್!‌ ಒಂದೇ ದಿನದಲ್ಲಿ 230 ಹೊಸ ಕೇಸ್‌!

masthmagaa.com:

ನೆರೆಯ ಕೇರಳದಲ್ಲಿ ಕೋವಿಡ್‌ ಕೇಸ್‌ಗಳ ಸಂಖ್ಯೆ ಜಾಸ್ತಿಯಾಗ್ತಿದ್ದು ಕೇರಳ ಸರ್ಕಾರ ಈ ಬಗ್ಗೆ ಗಂಭೀರ ಕ್ರಮಗಳನ್ನ ತಗೊಳ್ತಿದೆ. ಬುಧವಾರ ಒಂದೇ ದಿನ 230 ಹೊಸ ಪ್ರಕರಣಗಳು ದಾಖಲಾಗಿ ಒಟ್ಟಾರೆ ಕೇಸ್‌ಗಳ ಸಂಖ್ಯೆ 949ಕ್ಕೆ ಏರಿದೆ. ಇದೇ ಸಂಧರ್ಭ ಅಲ್ಲಿನ ಶಬರಿಮಲೆ ದೇವಸ್ಥಾನದಲ್ಲಿ 80 ಸಾವಿರಕ್ಕೂ ಹೆಚ್ಚು ಜನ್ರು ಸೇರಿದ್ದು ಕ್ರೌಡ್‌ನಿಂದಾಗಿ ಕೇಸ್‌ಗಳ ಸಂಖ್ಯೆ ಇನ್ನೂ ಹೆಚ್ಚಾಗೋ ಅವಕಾಶ ಇದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply