ದಿಢೀರ್ ಅಂತ ಹೆಚ್ಚಾಗ್ತಿರೋ ಕೊರೋನಾ ಬಗ್ಗೆ ಆರೋಗ್ಯ ಇಲಾಖೆ ಹೇಳಿದ್ದೇನು?

masthmagaa.com:

ದೇಶದಲ್ಲಿ ದಿಢೀರ್ ಅಂತ ಕೊರೋನಾ ಕೇಸಸ್​ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಇವತ್ತು ಸುದ್ದಿಗೋಷ್ಠಿ ನಡೆಸಿ ಕೆಲವೊಂದು ಮಾಹಿತಿ ನೀಡಿದೆ. ಕಳೆದ ವಾರ ಭಾರತದಲ್ಲಿ ಡೈಲಿ ಸರಾಸರಿ 8,000 ಕೇಸ್​ ಬರ್ತಿತ್ತು. ಡಿಸೆಂಬರ್ 26ರ ಬಳಿಕ ಡೈಲಿ ಎವರೇಜ್​ ಆಗಿ 10,000 ಕೇಸ್​ ಬರ್ತಿದೆ ಎಂದಿದ್ದಾರೆ. ಮುಂಬೈ, ಪುಣೆ, ಥಾಣೆ, ಬೆಂಗಳೂರು, ಚೆನ್ನೈ, ಗುರುಗ್ರಾಮಗಳಲ್ಲಿ ಕೊರೋನಾ ಏರಿಕೆಯಾಗಿದೆ. ದೇಶದ 8 ಜಿಲ್ಲೆಗಳಲ್ಲಿ ವೀಕ್ಲಿ ಪಾಸಿಟಿವಿಟಿ ರೇಟ್​ 10 ಪರ್ಸೆಂಟ್​​ಗೂ ಹೆಚ್ಚಿದೆ. ಇದರಲ್ಲಿ ಆರು ಜಿಲ್ಲೆಗಳು ಮಿಜೋರಾಂನದ್ದೇ ಆಗಿವೆ, ಉಳಿದ ಒಂದೊಂದು ಜಿಲ್ಲೆಗಳು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ್ದು. ಇನ್ನುಳಿದಂತೆ ದೇಶದ 14 ಜಿಲ್ಲೆಗಳಲ್ಲಿ ವೀಕ್ಲಿ ಪಾಸಿಟಿವಿಟಿ ರೇಟ್​ 5ರಿಂದ 10 ಪರ್ಸೆಂಟ್​ ಇದೆ ಎಂದಿದೆ. ಇನ್ನು ವ್ಯಾಕ್ಸಿನ್​ ಬಗ್ಗೆ ಮಾತನಾಡಿ, ಭಾರತ, ಅಮೆರಿಕ, ಚೀನಾ, ಇಸ್ರೇಲ್​ ಎಲ್ಲಾ ಕಡೆ ಸಿಗೋ ಕೊರೋನಾ ಲಸಿಕೆಗಳು ಕೂಡ ಡಿಸೀಸ್​ ಮಾಡಿಫೈಯಿಂಗ್​. ಸೋಂಕು ಬರದಂತೆ ಲಸಿಕೆಗಳು ತಡೆಯಲ್ಲ. ಆದ್ರೆ ಅವು ರೋಗದ ತೀವ್ರತೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಪ್ರಮಾಣವನ್ನ ಕಮ್ಮಿ ಮಾಡ್ತಾವೆ ಅಂತ ಹೇಳಿದೆ. ಇದರ ಜೊತೆಗೆ ಲಸಿಕೆ ಹಾಕೋ ಮೊದಲು ಮತ್ತು ಲಸಿಕೆ ಹಾಕಿದ ನಂತರೂ ಮಾಸ್ಕ್​ ಧರಿಸಬೇಕು. ದೊಡ್ಡ ಮಟ್ಟದಲ್ಲಿ ಜನ ಸೇರಬಾರ್ದು. ಎಲ್ಲಾ ರೀತಿಯ​ ರೂಪಾಂತರಿಯ ಚಿಕಿತ್ಸೆಗೂ ಈ ಹಿಂದೆ ಜಾರಿ ಮಾಡಿದ್ದ ಟ್ರೀಟ್​​ಮೆಂಟ್​ ಗೈಡ್​​ಲೈನ್ಸ್ ಅನ್ನೇ ಫಾಲೋ ಮಾಡಿ ಅಂತಾನೂ ಹೇಳಿದೆ. ಇದೇ ವೇಳೆ ಕೊರೋನಾ ಹೆಚ್ಚಾಗ್ತಿದ್ರೂ ರಾಜಕೀಯ ರ್ಯಾಲಿಗಳಲ್ಲಿ ಕೊರೋನಾ ನಿಯಮಗಳನ್ನ ಗಾಳಿಗೆ ತೂರಲಾಗ್ತಿದೆಯಲಾ ಅಂತ ಕೇಳಿದ್ದಕ್ಕೆ, ಇದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುತ್ತೆ, ಈ ವಿಷಯಕ್ಕೆ ಇದು ಸರಿಯಾದ ವೇದಿಕೆಯಲ್ಲ ಅಂತ ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply