ರಾಜ್ಯದ ಜನತೆಗೆ ಹೆಚ್ಚಾಯ್ತು ಕೋವಿಡ್‌ ಜೊತೆಗೆ ಫ್ಲ್ಯೂ ಭೀತಿ! ಕಟ್ಟೆಚ್ಚರ ವಹಿಸಿದ ಆರೋಗ್ಯ ಇಲಾಖೆ!

masthmagaa.com:

ರಾಜ್ಯದಲ್ಲಿ ಕೋವಿಡ್‌ ಜೊತೆಗೆ ಫ್ಲೂ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸ್ತಿದೆ. ಇದೀಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ ಜನರು ಭಯಪಡದೇ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದ್ದಾರೆ. ಜೊತೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ಮಾಸ್ಕ್‌ನ್ನ ಕಡ್ಡಾಯಗೊಳಿಸಲಾಗಿದೆ ಅಂತ ತಿಳಿಸಿದ್ದಾರೆ. ಇತ್ತ ದೇಶದಲ್ಲಿ ಮತ್ತೆ ಕೊರೊನಾ ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗ್ತಿದ್ದು, ಕಳೆದ 24 ಗಂಟೆಯಲ್ಲಿ 1,805 ಪ್ರಕರಣಗಳು ವರದಿಯಾಗಿವೆ. ಈ ಮೂಲಕ 134 ದಿನಗಳ ಬಳಿಕ ಆಕ್ಟಿವ್‌ ಕೇಸ್‌ಗಳ ಸಂಖ್ಯೆ 10 ಸಾವಿರ ಗಡಿ ದಾಟಿದೆ ಅಂತ ಕೇಂದ್ರ ಅರೋಗ್ಯ ಸಚಿವಾಲಯ ತಿಳಿಸಿದೆ. ಇನ್ನೊಂದ್‌ ಕಡೆ ಮಹಾರಾಷ್ಟ್ರದಲ್ಲಿ ಕೋವಿಡ್‌ ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಪುನಃ ಕೋವಿಡ್‌ ವಾರ್ಡ್‌ಗಳನ್ನ ಪ್ರಾರಂಭಿಸಲಾಗಿದೆ.

-masthmagaa.com

Contact Us for Advertisement

Leave a Reply