ಮೂವರಿಗೆ ಕೊರೋನಾ ಬಂದಿದ್ದಕ್ಕೆ 11 ಲಕ್ಷ ಜನರ ನಗರಕ್ಕೆ ಚೀನಾ ಬೀಗ!

masthmagaa.com:

ಚೀನಾದ ಝೀರೋ ಕೊರೋನಾ ನೀತಿಯಿಂದಾಗಿ ಮತ್ತೊಂದು ನಗರ ಲಾಕ್​ಡೌನ್​​ಗೆ ಒಳಗಾಗಿದೆ. ಹೆನಾನ್ ಪ್ರಾಂತ್ಯದ 11.17 ಲಕ್ಷ ಮಂದಿ ಜನ ವಾಸವಿರೋ ಯುಶೌ ನಗರವನ್ನು ಲಾಕ್​ಡೌನ್ ಮಾಡಿದೆ. ನಿನ್ನೆ ಮಧ್ಯರಾತ್ರಿಯಿಂದ ಲಾಕ್​​ಡೌನ್ ಆದೇಶ ಜಾರಿಯಾಗಿದ್ದು, ಯಾರೂ ಹೊರಗೆ ಬರಬಾರದು ಅಂತ ಆದೇಶಿಸಲಾಗಿದೆ. ಕಳೆದ ಕೆಲ ದಿನಗಳಲ್ಲಿ ಈ ಭಾಗದ ಮೂರು ಮಂದಿಗೆ ಸೋಂಕು ತಗುಲಿದ್ದಕ್ಕೆ ಈ ಹೆಜ್ಜೆ ಇಟ್ಟಿದೆ ಚೀನಾ ಆಡಳಿತ.. ಇನ್ನು 1.3 ಕೋಟಿ ಜನಸಂಖ್ಯೆ ಹೊಂದಿರೋ ಶಿಯಾನ್ ನಗರ ಕೂಡ ಕಳೆದ ಹಲವು ದಿನಗಳಿಂದ ಲಾಕ್​ಡೌನ್​​​ಗೆ ಒಳಗಾಗಿದೆ. ಝೀರೋ ಕೊರೋನಾ ಜೊತೆಗೆ ಫೆಬ್ರವರಿಯಲ್ಲಿ ವಿಂಟರ್ ಒಲಿಂಪಿಕ್ಸ್ ನಡೆಯಲಿರೋದ್ರಿಂದ ಚೀನಾ ಇಟ್ಟು ಕಟ್ಟುನಿಟ್ಟಾಗಿ ಕೊರೋನಾ ತಡೆಗೆ ಕ್ರಮ ಕೈಗೊಳ್ತಿದೆ. ಅಂದಹಾಗೆ ಚೀನಾದಲ್ಲಿ ಕಳೆದ 24 ಗಂಟೆಯಲ್ಲಿ 175 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply