ತಾಯಿಯ ಗರ್ಭದಲ್ಲಿ ಇರುವಾಗಲೇ ತಗುಲಿದ ಕೊರೊನಾ!

masthmagaa.com:

ತಾಯಿಯ ಗರ್ಭದಲ್ಲಿರುವಾಗ್ಲೇ ಎರಡು ಭ್ರೂಣಗಳಿಗೆ ಕೊರೊನಾ ಸೋಂಕು ತಗುಲಿ ಮೆದುಳಿಗೆ ಹಾನಿಯಾಗಿರೊ ಘಟನೆ ಬೆಳಕಿಗೆ ಬಂದಿದೆ. ಎರಡು ಶಿಶುಗಳಲ್ಲಿ ಒಂದು ಶಿಶು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಮತ್ತೊಂದು ಶಿಶುವನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ವಿಶ್ವದಲ್ಲೇ ಈ ರೀತಿಯ ಮೊದಲ ಪ್ರಕರಣ ಇದಾಗಿದೆ. ಈ ಮಾಹಿತಿ ಪೀಡಿಯಾಟ್ರಿಕ್ಸ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ. 2020ರ 2ನೇ ತ್ರೈಮಾಸಿಕದಲ್ಲಿ ಕೊರೊನಾದ ಡೆಲ್ಟಾ ರೂಪಾಂತರಕ್ಕೆ ಈ ಶಿಶುಗಳು ತುತ್ತಾಗಿದ್ದವು. ಈ ಶಿಶುಗಳು ಕೊರೊನಾ ವೈರಸ್‌ ವಿರುದ್ಧ ತಮ್ಮ ರಕ್ತದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದವು ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆದ್ರೆ ಮೆದುಳಿಗೆ ಹಾನಿಯಾಗಿದ್ರಿಂದ ಒಂದು ಮಗು ಮೃತಪಟ್ಟಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply