-Amar Prasad
@amarprasad_ap

ಕೊರೋನಾ ನೈಸರ್ಗಿಕ ಸೃಷ್ಟಿಯಲ್ಲ.. ಅದು ಚೀನಾದ ಲ್ಯಾಬ್​​ನಲ್ಲಿ ಕೃತಕವಾಗಿ ತಯಾರಿಸಲಾಗಿದ್ದು, ಅಲ್ಲಿಂದಲೇ ಲೀಕ್ ಆಗಿದೆ ಅನ್ನೋ ವಾದ ದಿನದಿಂದ ದಿನಕ್ಕೆ ಗಟ್ಟಿಯಾಗ್ತಿದೆ. ಇದೀಗ ಬ್ರಿಟಿಷ್ ಇಂಟಲಿಜೆನ್ಸ್ ಏಜೆನ್ಸಿ ಕೂಡ ಇದೇ ಥಿಯರಿ ಮುಂದಿಟ್ಟಿದೆ. ಚೀನಾದ ಲ್ಯಾಬ್​​​ಗಳ ಮೂಲಕವೇ ಕೊರೋನಾ ಹರಡಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದೆ. ಇದ್ರ ಬೆನ್ನಲ್ಲೇ ಯುನೈಟೆಡ್ ಕಿಂಗ್​ಡಮ್​​​​ ಲಸಿಕೆ ಸಚಿವ ನದಿಮ್ ಝಹವಿ ವಿಶ್ವ ಆರೋಗ್ಯ ಸಂಸ್ಥೆ ಈ ವಿಚಾರದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಬೇಕು ಅಂತ ಒತ್ತಾಯಿಸಿದ್ದಾರೆ. ಈ ಹಿಂದೆ ಬ್ರಿಟನ್ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳ ಗುಪ್ತಚರ ಸಂಸ್ಥೆಗಳು ಕೊರೋನಾ ಲ್ಯಾಬ್​ನಿಂದ ಹರಡಿರೋ ಸಾಧ್ಯತೆ ತುಂಬಾ ಕಡಿಮೆ ಅಂತ ಅಂದಾಜಿಸಿದ್ರು. ಆದ್ರೀಗ ಮತ್ತೆ ನಡೆದ ಅಧ್ಯಯನಲ್ಲಿ ಕೊರೋನಾ ಲ್ಯಾಬ್​ನಿಂದಲೇ ಲೀಕ್ ಆಗಿ ಹರಡಿದ್ದು ಅನ್ನೋ ವಾದಕ್ಕೆ ಬಲ ಸಿಕ್ಕಿದೆ ಅಂತ ಸಂಡೇ ಟೈಮ್ಸ್ ವರದಿ ಮಾಡಿದೆ. ಚೀನಾದ ವುಹಾನ್​ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದಲೇ ಕೊರೋನಾ ಹರಡಿದ್ದು ಅನ್ನೋದು ಈ ಥಿಯರಿ ನಂಬುವವರ ವಾದ.. ಈ ಲ್ಯಾಬ್ ಇರೋದು ಚೀನಾದ ಸೀ ಫುಡ್ ಮಾರ್ಕೆಟ್ ಹತ್ರ.. ಅಂದ್ರೆ ಕೊರೋನಾದ ಫಸ್ಟ್ ಕೇಸ್ ಪತ್ತೆಯಾಗಿತ್ತು ಅಂತ ಹೇಳಿತ್ತಲಾ ಚೀನಾ.. ಅಲ್ಲಿ.. ವೆಸ್ಟರ್ನ್​ ಇಂಟಲಿಜೆನ್ಸ್ ಸಂಸ್ಥೆಗಳು ಚೀನಾದಲ್ಲಿ ಗುಪ್ತಚರರನ್ನು ಹೊಂದಿದ್ದು ಡಾರ್ಕ್​ ವೆಬ್​ ಮೂಲಕ ಮಾಹಿತಿ ಸಂಗ್ರಹಿಸ್ತಿದ್ದಾರೆ ಅಂತ ಕೂಡಾ ತಿಳಿದು ಬಂದಿದೆ. ಈ ನಡುವೆ ಬ್ರಿಟಿಷ್ ಪ್ರೊಫೆಸರ್ ಎಂಗಸ್​ ಮತ್ತು ನಾರ್ವೆ ವಿಜ್ಞಾನಿ ಬಿರ್ಗರ್ ಸೊರೆನ್ಸೇನ್ ಕೂಡಾ ಒಂದು ಸಂಶೋಧನಾ ವರದಿ ನೀಡಿದ್ದು, ಅದ್ರಲ್ಲಿ ಕೊರೋನಾ ಪ್ರಾಕೃತಿಕವಾಗಿ ಬಂದಿದ್ದಲ್ಲ.. ವುಹಾನ್​ ಲ್ಯಾಬ್​ನ ಗೇನ್ ಆಫ್ ಫಂಕ್ಷನ್ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿದ್ರು. ಮಾಮೂಲಿ ಬಾವಲಿಗಳಲ್ಲಿರೋ ಸಾಮಾನ್ಯ ಕೊರೋನಾ ವೈರಸ್ ತೆಗೆದು, ಅದರಲ್ಲಿ ಹೊಸ ಸ್ಪೈಕ್ಸ್​​ಗಳನ್ನು ಆಡ್​ ಮಾಡಿ ಮತ್ತಷ್ಟು ಘಾತಕಗೊಳಿಸಿ ಬಿಡುಗಡೆ ಮಾಡಲಾಯ್ತು ಅಂತ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ನಡುವೆ ಚೀನಾ ವೈರಾಲಜಿಸ್ಟ್​ ಡಾ.ಲಿ ಮೆಂಗ್ ಯಾನ್, ಕೊರೋನಾ ಚೀನಾದ ಲ್ಯಾಬ್​​ನಿಂದಲೇ ಉದ್ದೇಶಪೂರ್ವಕವಾಗಿಯೇ ಬಯೋ ವೆಪನ್ ರೀತಿಯಲ್ಲಿ ಬಿಡುಗಡೆ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಇದ್ರ ಬೆನ್ನಲ್ಲೇ ಅಮೆರಿಕ ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೋ, ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಸಿವಿಲಿಯನ್ ರಿಸರ್ಚ್​​ ಜೊತೆ ಜೊತೆಗೆ ಸೇನೆ ಜೊತೆಗೂ ಕೆಲಸ ಮಾಡ್ತಿತ್ತು ಅನ್ನೋದು ನಮಗೆ ಗೊತ್ತಿತ್ತು. ಈ ಬಗ್ಗೆ ಮಾಹಿತಿ ನೀಡಲು ಚೀನಾ ನಿರಾಕರಿಸಿತ್ತು. ನಂತರ ವಿಶ್ವ ಆರೋಗ್ಯ ಸಂಸ್ಥೆಯ ತಂಡ ತನಿಖೆಗೆ ಹೋದಾಗಲು ಲ್ಯಾಬ್​​​ನಲ್ಲಿ ತನಿಖೆ ನಡೆಸಲು ಅನುಮತಿ ನೀಡಿರಲಿಲ್ಲ ಅಂತ ಹೇಳಿದ್ದಾರೆ. ಈ ನಡುವೆ ಕೊರೋನಾ ಮೂಲ ಪತ್ತೆಗೆ ವಿಶ್ವಕ್ಕೆ ಚೀನಾ ಸರ್ಕಾರದ ಸಹಕಾರ ಬೇಕು. ಈ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಬೇರೆ ಮಹಾಮಾರಿಗಳನ್ನು ತಡೆಯಬೇಕು ಅಂತ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞರು ಎಚ್ಚರಿಸಿದ್ದಾರೆ. ಚೀನಾದ ಲ್ಯಾಬ್​ನಿಂದ ಕೊರೋನಾ ಹರಡಿದ್ದು ಅನ್ನೋ ವಾದ ಗಟ್ಟಿಯಾಗ್ತಿದ್ರೂ, ಅದು ಸುಳ್ಳು ಅಂತ ಪ್ರೂವ್ ಮಾಡೋಕೆ ಚೀನಾ ಯಾವುದೇ ಸಾಕ್ಷ್ಯ ನೀಡಿಲ್ಲ. ಒಂದು ವೇಳೆ ಕೊರೋನಾದ ಮೂಲವನ್ನು ಸಂಪೂರ್ಣವಾಗಿ ಪತ್ತೆ ಹಚ್ಚದೇ ಇದ್ರೆ ಮುಂದೆ ಕೋವಿಡ್​ 26 ಬರಬಹುದು, ಕೋವಿಡ್ 32 ಬರಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಕೊರೋನಾ ಬಂದು 18 ತಿಂಗಳಾದ್ರೂ ಕೂಡ ಇನ್ನು ಅದ್ರ ಮೂಲ ಪತ್ತೆಯಾಗಿಲ್ಲ.

-masthmagaa.com

Contact Us for Advertisement

Leave a Reply