ಕೇರಳದಲ್ಲಿ ಕೋವಿಡ್‌: ರಾಜ್ಯದಲ್ಲಿ ಕ್ರಿಸ್‌ಮಸ್‌ಗೆ ಬೀಳುತ್ತಾ ಬ್ರೇಕ್?

masthmagaa.com:

ನೆರೆಯ ರಾಜ್ಯ ಕೇರಳದಲ್ಲಿ ದಿನೇ ದಿನೇ ಕೋವಿಡ್‌ ಕೇಸ್‌ಗಳು ಜಾಸ್ತಿಯಾಗ್ತಿರೋ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದಿದೆ. ಹೀಗಾಗಿ ಕ್ರಿಸ್’ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಟಫ್ ರೂಲ್ಸ್‌ಗಳನ್ನ ರಾಜ್ಯ ಸರ್ಕಾರ ಶಿಫಾರಸು ಮಾಡುವ ಸಾಧ್ಯತೆಗಳಿವೆ ಅಂತ ಹೇಳಲಾಗ್ತಿದೆ. ಶನಿವಾರ ಆರೋಗ್ಯ ಸಚಿವ ದಿನೇಶ್‌ ಗೂಂಡುರಾವ್‌ ತುರ್ತು ಸಭೆ ನಡೆಸಿ ಕೇರಳದಲ್ಲಿ ಕೊರೋನಾ ಹಾಗೂ ರೂಪಾಂತರಿ JN-1 ಹಾವಳಿ ಕುರಿತು ಮಾಹಿತಿ ಪಡೆದಿದ್ರು. ಇದೀಗ ಆರೋಗ್ಯ ಇಲಾಖೆ ಆಸ್ಪತ್ರೆಗಳನ್ನ ಪರಿಶೀಲನೆ ಮಾಡೋಕೆ ಶುರು ಮಾಡಿದೆ. ಅಗತ್ಯ ಆಕ್ಸಿಜನ್‌, ವೆಂಟಿಲೇಟರ್‌ಗಳ ಬಗ್ಗೆ ಹೆಲ್ತ್‌ ಡಿಪಾರ್ಟ್‌ಮೆಂಟ್‌ ಗಮನ ಹರಿಸಿದೆ. ಮತ್ತೊಂದೆಡೆ ಕೇರಳದ ಶಬರಿ ಮಲೈನಿಂದ ಬರೋ ರಾಜ್ಯದ ಭಕ್ತರ ಮೇಲೂ ನಿಗಾ ವಹಿಸಲಾಗಿದೆ. ಹಾಗೂ ಹಿರಿಯ ನಾಗರಿಕರು, ರೋಗಿಗಳಿಗೆ ಮುಂಜಾಗೃತ ಕ್ರಮವಾಗಿ ಮಾಸ್ಕ್‌ ಧರಿಸುವಂತೆ ಹೆಲ್ತ್‌ ಡಿಪಾರ್ಟ್‌ಮೆಂಟ್‌ ಸೂಚಿಸಿದೆ. ಹೀಗಾಗಿ ಮಂಗಳವಾರದ ಮೀಟಿಂಗ್‌ನಲ್ಲಿ ಕಠಿಣ ಕ್ರಮಗಳು ಜಾರಿ ಮಾಡೋ ಬಗ್ಗೆ ಚಿಂತನೆ ನಡೆಸಬಹುದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply