ಡೆಲ್ಟಾ ವೈರಾಣು ವಿರುದ್ಧವೂ ಕೋವ್ಯಾಕ್ಸಿನ್​ನಿಂದ ರಕ್ಷಣೆ!

masthmagaa.com:

ಬೀಟಾ ಮತ್ತು ಡೆಲ್ಟಾ ವೈರಾಣುಗಳ ವಿರುದ್ಧ ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್ ರಕ್ಷಣೆ ನೀಡುತ್ತೆ ಅಂತ ಸಂಶೋಧನೆಯಿಂದ ತಿಳಿದು ಬಂದಿದೆ. ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​​ ಮತ್ತು ಭಾರತ್ ಬಯೋಟೆಕ್​ ಅಧ್ಯಯನದಲ್ಲಿ ಈ ವಿಚಾರ ಬಹಿರಂಗವಾಗಿದೆ. ಈ ಡೆಲ್ಟಾ ರೂಪಾಂತರಿ ಮೊದಲು ಭಾರತದಲ್ಲಿ ಪತ್ತೆಯಾದ್ರೆ, ಬೀಟಾ ರೂಪಾಂತರಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿತ್ತು. ಕೊರೋನಾ ಬಂದು ರಿಕವರ್ ಆಗಿರೋ 20 ಮಂದಿ ಮತ್ತು ಎರಡು ಡೋಸ್ ಕೊರೋನಾ ಲಸಿಕೆ ಹಾಕಿಸಿಕೊಂಡ 17 ಮಂದಿಯ ಸ್ಯಾಂಪಲ್ ಪಡೆದು ಈ ಅಧ್ಯಯನ ನಡೆಸಲಾಗಿತ್ತು. ಜೊತೆಗೆ ಡೆಲ್ಟಾ ರೂಪಾಂತರಿ ಯುನೈಟೆಡ್ ಕಿಂಗ್​​ಡಮ್​​​ನಲ್ಲಿ ಪತ್ತೆಯಾದ ಆಲ್ಫಾಗಿಂತ ಹೆಚ್ಚು ಸಾಂಕ್ರಮಣಕಾರಿ ಮತ್ತು 50 ಪರ್ಸೆಂಟ್​​ನಷ್ಟು ಹೆಚ್ಚು ಕಂಟೇಜಿಯಸ್​ ಅಂತ ಸಂಶೋಧಕರು ಹೇಳಿದ್ದಾರೆ. ಆದ್ರೆ ಸಾವು ಮತ್ತು ಸೀರಿಯಸ್ ಆಗ್ತಿರೋರ ಸಂಖ್ಯೆ ಹೆಚ್ಚಳದ ಹಿಂದೆ ಡೆಲ್ಟಾ ಪಾತ್ರ ಇರೋದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದ್ರೆ ಇದೇ ವೇಳೆ ಏಮ್ಸ್​ ಮತ್ತು ಎನ್​ಸಿಡಿಸಿ ಅಂದ್ರೆ ನ್ಯಾಷನಲ್ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್ ನಡೆಸಿರೋ ಅಧ್ಯಯನದಲ್ಲಿ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಲಸಿಕೆ ಎರಡು ಡೋಸ್ ಹಾಕಿಸಿಕೊಂಡ ಬಳಿಕವೂ ಡೆಲ್ಟಾ ವೈರಾಣು ಅಟಕಾಯಿಸಿಕೊಳ್ಳುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply