ಅಪ್ಪು ಸ್ಮರಣಾರ್ಥ ಮೇನಲ್ಲಿ ಡಾ.ರಾಜ್ ಕ್ರಿಕೆಟ್ ಪಂದ್ಯಾವಳಿ!

masthmagaa.com:

ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘದ ವತಿಯಿಂದ ಐದನೇ ವರ್ಷದ ಡಾ.ರಾಜ್ ಕ್ರಿಕೆಟ್ ಕಪ್ ಟೂರ್ನಿ ಮೇ ತಿಂಗಳ 13,14 ಹಾಗೂ 15ರಂದು ನಡೆಯಲಿದೆ ಎಂದು ನೃತ್ಯ ನಿರ್ದೇಶಕರ ಸಂಘದ ಅಧ್ಯಕ್ಷರಾದ ರಾಜೇಶ್ ಬ್ರಹ್ಮಾವರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಿಕೆಟ್ ಪಂದ್ಯವಳಿಯಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಪ್ರದರ್ಶಕರು, ಶಾಸಕರು, ಪತ್ರಕರ್ತರು, ಕಾರ್ಮಿಕರು ಹಾಗೂ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಎಲ್ಲಾ ವರ್ಗದವರು ಭಾಗವಹಿಸುತ್ತಿದ್ದಾರೆ, ಜೊತೆಗೆ ಒಬ್ಬ ಕಾಮನ್ ಮ್ಯಾನ್ ಕೂಡ ಇರುತ್ತಾರೆ ಎಂದೂ ಹೇಳಿದರು. ಬಿಜಿಎಸ್ ಗ್ರೌಂಡ್ ನಲ್ಲಿ ನಡೆಯಲಿರುವ ಮೂರು ದಿನಗಳ ಕಾಲ ನಡೆಯಲಿರುವ ಡಾ.ರಾಜ್ ಕ್ರಿಕೆಟ್ ಕಪ್ ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿ ದುಬೈನ ಶಾರ್ಜಾದಲ್ಲಿ ಜೂನ್ ಮೊದಲವಾರ ನಡೆಯಲಿದೆ.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಮಾತನಾಡಿ ಇಡೀ ಚಿತ್ರೋದ್ಯಮ ಒಟ್ಟಾಗಿ ಸೇರಿ ಮಾಡುವ ಕಾರ್ಯಕ್ರಮವಿದು. ಇದಕ್ಕೆ ಚೇಂಬರ್ ಬೆಂಬಲ ಇದೆ ಎಂದರು.
ಮಾಜಿ ಅಧ್ಯಕ್ಷ ಸಾ. ರಾ.ಗೋವಿಂದು ಮಾತನಾಡಿ, ಬಹಳ ವರ್ಷಗಳ ನಂತರ ರಾಜ್ ಕಪ್ ನಡೆಯುತ್ತಿದೆ. ಇಂಡಸ್ಟ್ರಿಯಲ್ಲಿ ಸೌಹಾರ್ದಯುತ ವಾತಾವರಣ ಕ್ರಿಯೇಟ್ ಮಾಡುವ ಕೆಲಸವೂ ಈ ಮೂಲಕ ನಡೆಯುತ್ತಿದೆ. ಇಂಡಸ್ಟ್ರಿ ವತಿಯಿಂದ ನಾವು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ.
ಈಗ ರಾಜ್ ಜೊತೆ ಪುನೀತ್ ಹೆಸರೂ ಸಹ ಸೇರ್ಪಡೆಯಾಗಿದೆ ಎಂದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ವರ್ಷದಿಂದ ಇದರಬಗ್ಗೆ ಚರ್ಚೆ ನಡೆಯುತ್ತಿದೆ. ಅಪ್ಪು ಅವರು ತಂಡದ ನೇತೃತ್ವ ವಹಿಸಿಕೊಳ್ಳಬೇಕಿತ್ತು. ಆದರೆ ಅವರ ಸ್ಮರಣಾರ್ಥ ನಡೆಸಬೇಕಾಗಿದೆ. 2011ರಲ್ಲಿ ನಿರ್ಮಾಪಕರ ಸಂಘ ಕಪ್ ಗೆದ್ದಿತ್ತು ಎಂದು ಹೇಳಿದರು. ನಿರ್ಮಾಪಕ ಕೆ.ಮಂಜು, ಎನ್.ಎಂ.ಸುರೇಶ್, ನಾಗಣ್ಣ, ಗಣೇಶ್, ಫೈವ್ ಸ್ಟಾರ್ ಗಣೇಶ್ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದು ಮಾನಾಡಿದರು.

-masthmagaa.com

Contact Us for Advertisement

Leave a Reply