ವರ್ಲ್ಡ್‌ ಕಪ್‌ ವಿಜೇತ ತಂಡಕ್ಕೆ ಎಷ್ಟು ಬಹುಮಾನ ಗೊತ್ತಾ?

masthmagaa.com:

ಭಾರತ ವರ್ಸಸ್‌ ಆಸ್ಟ್ರೇಲಿಯಾ ಫೈನಲ್‌ ಮ್ಯಾಚ್‌ ಅಹಮದಾಬಾದ್‌ ಸ್ಟೇಡಿಯಂನಲ್ಲಿ ನಡಿತಾಯಿದೆ. ಭಾರತವನ್ನ ಸಪೋರ್ಟ್‌ ಮಾಡೋಕೆ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್‌ ಶಾ ಬಂದ್ರೆ, ಆತ್ತ ಆಸ್ಟ್ರೇಲಿಯಾ ಟೀಂನ್ನ ಸಪೋರ್ಟ್‌ ಮಾಡೋಕೆ ಅಲ್ಲಿನ ಡೆಪ್ಯೂಟಿ ಪ್ರಧಾನಿ ಉಪಸ್ಥಿತರಿರಲಿದ್ದಾರೆ. ಇನ್ನು ಫೈನಲ್‌ನಲ್ಲಿ ಭಾರತ ವಿನ್‌ ಆಗೋ ಚಾನ್ಸ್‌ 100 ರಲ್ಲಿ 95 ರಷ್ಟಿದೆ ಅಂತ ಇಂಗ್ಲೆಂಡ್‌ನ ಲೆಜೆಂಡರಿ ಕ್ರಿಕೆಟ್‌ ಆಟಗಾರ ಸ್ಟುವರ್ಟ್‌ ಬ್ರಾಡ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ವಿನ್ನರ್‌ ಹಾಗೂ ರನ್ನರ್‌ ಟೀಂಗಳಿಗೆ ನೀಡುವ ಪ್ರೈಜ್‌ ಮನಿಯನ್ನ ICC ಅನೌನ್ಸ್‌ ಮಾಡಿದೆ. ವಿನ್ನಿಂಗ್‌ ಟೀಂಗೆ 4 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 33 ಕೋಟಿ ರೂಪಾಯಿ ಬಹುಮಾನ ಸಿಕ್ರೆ, ರನ್ನರ್‌ ಅಪ್‌ ಆದ ತಂಡಕ್ಕೆ 2 ಮಿಲಿಯನ್‌ ಡಾಲರ್‌ ಅಂದ್ರೆ, ಸುಮಾರು 16.6 ಕೋಟಿ ರೂಪಾಯಿ ನೀಡೋದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ಅಂದ್ರೆ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾಗೆ ತಲಾ 8 ಲಕ್ಷ ಡಾಲರ್‌ ಹಾಗೂ ಗ್ರೂಪ್‌ ಸ್ಟೇಜ್‌ನಲ್ಲಿ ಎಲಿಮಿನೇಟ್‌ ಆದ 6 ತಂಡಗಳಿಗೆ ತಲಾ 1 ಲಕ್ಷ ಡಾಲರ್‌, ಇನ್ನು ಲೀಗ್‌ ಹಂತದಲ್ಲಿ ತಂಡಗಳು ಗೆದ್ದ ಪ್ರತಿ ಮ್ಯಾಚ್‌ಗೆ 40 ಸಾವಿರ ಡಾಲರ್‌ ಕೊಡಲಾಗಿದೆ. ಈ ಮೂಲಕ ವರ್ಲ್ಡ್‌ ಕಪ್‌ ಒಟ್ಟು 10 ಮಿಲಿಯನ್‌ ಡಾಲರ್‌ ಬಹುಮಾನ ನೀಡಿದಂತಾಗುತ್ತೆ.

-masthmagaa.com

Contact Us for Advertisement

Leave a Reply