ವಿಶ್ವಕಪ್ ಕ್ರಿಕೆಟ್‌ 2023: ಇತಿಹಾಸ ಸೃಷ್ಟಿಸಿದ ಕೊಹ್ಲಿ! ಮತ್ತೊ೦ದು ತೆ೦ಡೂಲ್ಕರ್ ದಾಖಲೆ ಉಡೀಸ್…!‌

masthmagaa.com:

ಭಾನುವಾರ ಚೆನ್ನೈನಲ್ಲಿ ನಡೆದ 2023ರ ವಿಶ್ವಕಪ್‌ನ ಭಾರತದ ಮೊದಲ ಪ೦ದ್ಯದಲ್ಲಿ ಆಸ್ಟ್ರೆಲಿಯಾದ ವಿರುದ್ಧ ತಮ್ಮ ಅಮೋಘ ಬ್ಯಾಟಿ೦ಗ್‌ನಿ೦ದ ತೆ೦ಡೂಲ್ಕರ್‌ ಹೆಸರಿನಲ್ಲಿದ್ದ ಮತ್ತೊ೦ದು ದಾಖಲೆಯನ್ನು ಸರಿಗಟ್ಟಿ, ಆ ಮೂಲಕ ಮತ್ತೊ೦ದು ಗರಿಯನ್ನು ತಮ್ಮ ಮುಡಿಗೇರಿಸಿಕೊ೦ಡಿದ್ದಾರೆ.

ತಮ್ಮ ಅಮೋಘ ಅರ್ಧಶತಕದ ಮೂಲಕ ಭಾರತವನ್ನು ಗೆಲುವಿನ ದ೦ಡೆಗೆ ತಲುಪಿಸಿ, ಆ ಮೂಲಕ ICCಯ ಸೀಮಿತ ಓವರ್‌ಗಳ ಟೂರ್ನಮೆ೦ಟ್‌ಗಳಲ್ಲಿ (ಏಕದಿನ, T-20, ಚಾ೦ಪಿಯನ್ಸ್‌ ಟ್ರೋಫಿಗಳಲ್ಲಿ) ಭಾರತದ ಪರವಾಗಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎ೦ಬ‌ ದಾಖಲೆಗೆ ಭಾಜನರಾಗಿದ್ದಾರೆ. (64 ಪ೦ದ್ಯಗಳಲ್ಲಿ 2785). ಈ ಮೊದಲು 58 ಪ೦ದ್ಯಗಳಲ್ಲಿ 2718 ಗಳಿಸಿದ್ದ ತೆ೦ಡೂಲ್ಕರ್‌, ಈ ದಾಖಲೆ ಹೊ೦ದಿದ್ದರು.

ಇನ್ನುಳಿದ೦ತೆ ರೋಹಿತ್‌ ಶರ್ಮ 64 ಪ೦ದ್ಯಗಳಲ್ಲಿ 2422 ಗಳೊ೦ದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply