ಚೀನಾದಲ್ಲಿ ಕೊರೋನಾ ಜೊತೆಗೆ ಡೆಡ್ಲಿ ಬ್ಯಾಕ್ಟೀರಿಯಾ ಹಾವಳಿ

masthmagaa.com:

ಕೊರೋನಾ ಬಂದ ಬಳಿಕ ಈ ಜಗತ್ತು ಹೊಸ ಹೊಸ ಕಾಯಿಲೆಗಳನ್ನು ನೋಡ್ತಾ ಇದೆ. ಇದುವರೆಗೆ ಕೇಳದೇ ಇದ್ದ ಬ್ಯಾಕ್ಟೀರಿಯಾಗಳ ಹೆಸರು ಕೂಡ ಕೇಳ್ತಿದ್ದೀವಿ. ಅದೇ ರೀತಿ ಈಗ ಚೀನಾದಲ್ಲಿ ವ್ಯಕ್ತಿಯೊಬ್ಬರಲ್ಲಿ ಅಂಥ್ರಾಕ್ಸ್ ನ್ಯುಮೋನಿಯಾ ಕಾಯಿಲೆ ಪತ್ತೆಯಾಗಿದೆ. ಸದ್ಯ ಈ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಬೀಜಿಂಗ್​​ಗೆ ಸಾಗಿಸಿ, 4 ದಿನಗಳಿಂದ ಚಿಕಿತ್ಸೆ ನೀಡಲಾಗ್ತಿದೆ. ಈ ಬ್ಯಾಕ್ಟೀರಿಯಾ ದೇಹ ಪ್ರವೇಶಿಸಿದ್ರೆ, ವಾಕರಿಕೆ, ವಾಮಿಟ್ ಮತ್ತು ಡಯೇರಿಯಾದಂತ ಸಮಸ್ಯೆ ಶುರುವಾಗುತ್ತೆ. ಅಂಥ್ರಾಕ್ಸ್ ಅನ್ನೋದು ದನ ಮತ್ತು ಕುರಿಗಳಲ್ಲಿ ಕಂಡು ಬರೋ ಒಂದು ಬ್ಯಾಕ್ಟೀರಿಯಲ್ ಇನ್ಫೆಕ್ಷನ್​​.. ಈ ಬ್ಯಾಕ್ಟೀರಿಯಾದಿಂದ ಹುಷಾರು ತಪ್ಪಿರೋ ಪ್ರಾಣಿಗಳನ್ನು ಮುಟ್ಟಿದ್ರೂ ಅದು ಮನುಷ್ಯರಿಗೆ ಪಾಸ್ ಆಗೋ ಸಾಧ್ಯತೆ ಇರುತ್ತೆ. ಈ ವ್ಯಕ್ತಿ ಕೂಡ ದನ, ಕುರಿ ಸಂಪರ್ಕದಲ್ಲಿದ್ರು. ಜೊತೆಗೆ ಅವುಗಳ ಉತ್ಪನ್ನಗಳನ್ನು ಕೂಡ ಬಳಸ್ತಿದ್ರು. ಇದ್ರಿಂದಲೇ ಇವರಿಗೆ ಈ ಬ್ಯಾಕ್ಟೀರಿಯಾ ಅಂಟಿರೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply