ಅಧಿಕಾರದಲ್ಲಿರುವ ಕೇಂದ್ರ ಕಾನೂನು ಸಚಿವರು ಕರ್ತವ್ಯಕ್ಕೆ ಬದ್ಧರಾಗಿರಿ! ಹೇಳಿದ್ಯಾರು?

masthmagaa.com:

ಉನ್ನತ ಜಡ್ಜ್‌ಗಳನ್ನ ನೇಮಕ ಮಾಡೋ ಕೊಲಿಜಿಯಂ ವಿಚಾರವಾಗಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್‌ ಮುಸುಕಿನ ಗುದ್ದಾಟ ಹಾಗೆ ಇದೆ. ಇತ್ತೀಚೆಗೆ ಕೊಲಿಜಿಯಂ ಅನ್ನ ಟೀಕೆ ಮಾಡ್ತಿರೋ ಕೇಂದ್ರ ಲಾ ಮಿನಿಸ್ಟರ್‌ ಕಿರಣ್‌ ರಿಜಿಜು ಅವ್ರು ಅಧಿಕಾರ ವರ್ಗದಲ್ಲಿರೋರು, ಕರ್ತವ್ಯಕ್ಕೆ ಬದ್ಧವಾಗಿರ್ಬೇಕು. ಸುಪ್ರೀಂಕೋರ್ಟ್‌ನ ತೀರ್ಪುಗಳನ್ನ ಒಪ್ಪಿಕೊಳ್ಬೇಕು ಅಂತ ಮಾಜಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ರೋಹಿಂಟನ್‌ ಫಾಲಿ ನಾರಿಮನ್‌ ಹೇಳಿದ್ದಾರೆ. ಜೊತೆಗೆ ಕೊಲಿಜಿಯಂ ಶಿಫಾರಸು ಮಾಡಿದ ಜಡ್ಜ್‌ಗಳ ಹೆಸರನ್ನ ಕೇಂದ್ರ ಬೇಗ ಅನುಮೋದನೆ ನೀಡ್ಬೇಕು. ಅಥ್ವಾ ಸುಪ್ರೀಂಕೋರ್ಟ್‌ ಸರ್ಕಾರಕ್ಕೆ 30 ದಿನಗಳ ಗಡುವು ಕೊಡ್ಬೇಕು ಅಷ್ಟರೊಳಗೆ ಸರ್ಕಾರ ಯಾವುದೇ ನಿರ್ಧಾರ ಹೇಳಿಲ್ಲ ಅಂದ್ರೆ ತಾನಾಗೇ ಅನುಮೋದನೆ ಆಗಿದೆ ಅಂತ ನೇಮಕಾತಿ ಪೂರ್ಣಗೊಳಿಸ್ಬೇಕು. ಈ ರೀತಿಯ ಕಾನೂನನ್ನ ಸುಪ್ರೀಂಕೋರ್ಟ್‌ ಜಾರಿ ತಂದಾಗ ಮಾತ್ರ ಸರಿಯಾಗುತ್ತೆ. ಇಲ್ಲ ಅಂದ್ರೆ ಜಡ್ಜ್‌ ನೇಮಕ ವಿಚಾರದಲ್ಲಿ ಕೇಂದ್ರ ತೋರಿಸೋ ವಿಳಂಬದಿಂದ ಪ್ರಜಾಪ್ರಭುತ್ವಕ್ಕೆ ತೊಂದ್ರೆಯಾಗುತ್ತೆ ಅಂತ ನಾರಿಮನ್‌ ಅಭಿಪ್ರಾಯ ಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply