ಸಲೂನ್‍ಗೆ ನುಗ್ಗಿದ ಜಿಂಕೆ..! ಆಮೇಲೆ ಏನಾಯ್ತು ಗೊತ್ತಾ..? ವಿಡಿಯೋ ನೋಡಿ..

ಹೇರ್ ಸಲೂನ್ ಒಂದಕ್ಕೆ ಕೃಷ್ಣಮೃಗವೊಂದು ನುಗ್ಗಿದ ಘಟನೆ ಅಮೆರಿಕಾದ ನ್ಯೂಯಾಕ್‍ನಲ್ಲಿ ನಡೆದಿದೆ. ಗ್ಲಾಸ್ ಒಡೆದುಕೊಂಡು ಒಳನುಗ್ಗೋ ಕೃಷ್ಣಮೃಗ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು, ಎಲ್ಲಾ ಚೆಲ್ಲಾಪಿಲ್ಲಿ ಮಾಡಿ ಒಳಗೆ ಓಡಿಹೋಗುತ್ತೆ. ಸೋಫಾದಲ್ಲಿ ಕುಳಿತು ಜ್ಯೂಸ್ ಕುಡಿಯುತ್ತಾ ತಮ್ಮ ಸರದಿಗೆ ಕಾಯುತ್ತಿದ್ದ ಮಹಿಳೆ ಕೃಷ್ಣಮೃಗ ಕಂಡು ಹೌಹಾರಿದ್ದಾರೆ. ನಂತರ ಪುರ್ನ ಮತ್ತೊಂದು ಗ್ಲಾಸ್ ಒಡೆದು ಹೊರಗೆ ಓಡಿಹೋಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬ್ಯೂಟಿಫುಲ್ ಹೇರ್ ಸಲೂನ್ ಎಂಬ ಫೇಸ್‍ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.

https://www.facebook.com/beyoutilfulhair/videos/627223961139712/

ಕಾರು ಬಂದು ಸಲೂನ್‍ಗೆ ಡಿಕ್ಕಿ ಹೊಡೀತು ಎಂದು ನಾನು ಭಾವಿಸಿದೆ ಎಂದು ಒಬ್ಬರು ಬರೆದ್ರೆ, ಮತ್ತೊಬ್ಬರು ಅದಕ್ಕೆ ಹುಚ್ಚು ಹಿಡಿದಿರಬೇಕು, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ.

ಈ ವಿಡಿಯೋವನ್ನು ಸುಮಾರು 450ಕ್ಕೂ ಹೆಚ್ಚು ಜನ ಶೇರ್ ಮಡಿದ್ದಾರೆ.

Contact Us for Advertisement

Leave a Reply