ಮಾನನಷ್ಟ ಮೊಕದ್ದಮೆ ಕೇಸ್: ಬೇಗ ಹಣ ನೀಡಲು ಟ್ರಂಪ್‌ಗೆ ತಾಕೀತು!

masthmagaa.com:

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರೈಟರ್ ಜಿನ್‌ ಕ್ಯಾರೊಲ್‌ ಅವ್ರಿಗೆ 691 ಕೋಟಿ ರೂಪಾಯಿ ಕೊಡೊದನ್ನ ವಿಳಂಬ ಮಾಡ್ಬಾರ್ದು ಅಂತ ಫೆಡೆರಲ್‌ ಕೋರ್ಟ್‌ ಹೇಳಿದೆ. 1990 ವೇಳೆಯಲ್ಲಿ ಟ್ರಂಪ್ ಅವ್ರು ʻತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಅಂತ ಕ್ಯಾರೊಲ್ ಆರೋಪ ಮಾಡಿದ್ರು. ಈ ವಿಚಾರವನ್ನ ಟ್ರಂಪ್‌ ನಿರಾಕರಿಸಿದ್ರು. ಈ ವಿಚಾರವಾಗಿ ಕ್ಯಾರೊಲ್‌ 2019ರಲ್ಲಿ ಟ್ರಂಪ್‌ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ರು. ಹೀಗಾಗಿ ಫೆಡೆರಲ್‌ ಕೋರ್ಟ್‌ ಇತ್ತೀಚಿಗೆ ಕ್ಯಾರೊಲ್‌ ಅವ್ರಿಗೆ ಟ್ರಂಪ್‌ 83 ಮಿಲಿಯನ್‌ ಡಾಲರ್‌ ಅಂದ್ರೆ 691 ಕೋಟಿ ಹಣ ನೀಡ್ಬೇಕು ಅಂತೇಳಿ ಆದೇಶ ನೀಡಿತ್ತು.

-masthmagaa.com

Contact Us for Advertisement

Leave a Reply