ಕ್ರಿಕೆಟ್‌ಗೂ ಒಂದು ಡಿಗ್ರಿ.. ಕಬಡ್ಡಿ, ಕುಸ್ತಿಗೆ ಇನ್ನೊಂದು ಡಿಗ್ರಿ..! ದೆಹಲಿ ಸಿಎಂ ಕೇಜ್ರಿವಾಲ್‌ ಘೋಷಣೆ!

masthmagaa.com:

ದೆಹಲಿಯ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಕ್ರೀಡೆಗೆ ಅನುಗುಣವಾಗಿ ಬಿಎ ಪದವಿ ನೀಡ್ತೀವಿ ಅಂತ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಕ್ರೀಡಾ ಪಟುಗಳ ಆರ್ಥಿಕ ನೆರವಿನ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು ಪ್ರತೀ ಕ್ರೀಡೆಗೂ ಒಂದೊಂದು ಬಿಎ ಪದವಿ ನೀಡ್ತೀವಿ. ಕ್ರಿಕೆಟ್‌ಗೆ ಒಂದು ಬಿಎ, ಕಬ್ಬಡ್ಡಿಗೆ ಒಂದು ಬಿಎ, ಕುಸ್ತಿಗೆ ಒಂದು ಬಿಎ ಹೀಗೆ ಎಲ್ಲದಕ್ಕೂ ಡಿಗ್ರಿ ಕೊಡ್ತೀವಿ. ಹೆಚ್ಚಿನ ಯುವಕರು ಕ್ರೀಡಾಸಕ್ತಿಯಿಂದ ಓದನ್ನೇ ಬಿಟ್ಟು ಕೆಲಸ ಇಲ್ದೇ ತುಂಬಾ ಸಮಸ್ಯೆಗಳನ್ನ ಎದುರಿಸ್ತಿದ್ದಾರೆ. ಆದ್ರೆ ಈ ರೀತಿ ಮಾಡೋದ್ರಿಂದ ಭವಿಷ್ಯದಲ್ಲಿ ತುಂಬಾ ಹೆಲ್ಪ್‌ ಆಗುತ್ತೆ. ಅದೇ ಕ್ರೀಡೆಯಲ್ಲಿ ಉದ್ಯೋಗ ಪಡೆಯೋಕೆ ಇದು ಸಹಾಯ ಮಾಡುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply