ಮಾನಸಿಕ ರೋಗಿಯ ಹೊಟ್ಟೆಯಿಂದ ಬಂದ್ವು 39 ನಾಣ್ಯ, 37 ಆಯಸ್ಕಾಂತಗಳು!

masthmagaa.com:

ರೋಗಿಯೊಬ್ಬನ ಕರುಳಿನ ಶಸ್ತ್ರ ಚಿಕಿತ್ಸೆ ಮಾಡಿ 39 ನಾಣ್ಯಗಳು ಹಾಗೂ 37 ಆಯಸ್ಕಾಂತಗಳನ್ನ ಹೊರತೆಗೆದಿರೋ ಅಚ್ಚರಿಯ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ 26 ವರ್ಷದ ಈ ರೋಗಿ, ತನ್ನ ದೇಹ ಬಲ ವರ್ಧನೆಗಾಗಿ ನಾಣ್ಯ ಹಾಗೂ ಆಯಸ್ಕಾಂತಗಳನ್ನ ನುಂಗಿದ್ದ ಅಂತ ವರದಿಯಾಗಿದೆ. ಇವುಗಳನ್ನ ನುಂಗಿದ ಪರಿಣಾಮ ಕಳೆದ 20 ದಿನಗಳಿಂದ ಯಾವುದೇ ಆಹಾರ ತಿನ್ನೋಕಾಗಿರ್ಲಿಲ್ಲ. ಪದೇ ಪದೇ ವಾಂತಿ ಜೊತೆಗೆ ತೀವ್ರವಾದ ಹೊಟ್ಟೆ ನೋವು ಕಾಣ್ಸಿಕೊಂಡಿತ್ತು. ಹೀಗಾಗಿ ದೆಹಲಿಯ ಸರ್‌ ಗಂಗಾ ರಾಮ ಆಸ್ಪತ್ರೆಗೆ ದಾಖಲಾಗಿದ್ದ. ಹೊಟ್ಟೆಯನ್ನ ತಪಾಸಣೆ ಮಾಡಿದ ವೈದ್ಯರಿಗೆ ಆಗ ನಾಣ್ಯಗಳಿರೋ ವಿಚಾರ ತಿಳಿದಿದೆ. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಹೊರೆತೆಗೆದಿದ್ದಾರೆ.

-masthmagaa.com

Contact Us for Advertisement

Leave a Reply