ಪ್ರಮುಖ 4 ಮಸೂದೆಗಳಿಗೆ ಸಹಿ ಹಾಕಿದ ರಾಷ್ಟ್ರಪತಿ!

masthmagaa.com:

ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರವಾಗಿದ್ದ 4 ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ. ಇದರಲ್ಲಿ ಪ್ರಮುಖ ಮಸೂದೆಗಳಾಗಿದ್ದ ದೆಹಲಿ ಸೇವಾ ಮಸೂದೆ ಮತ್ತು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (ಡಿಪಿಡಿಪಿ) ಮಸೂದೆಗೆ ರಾಷ್ಟ್ರಪತಿಗಳು ನಿನ್ನೆ ತಡರಾತ್ರಿ ಸಹಿ ಹಾಕಿದ್ದಾರೆ. ದೆಹಲಿ ಸರ್ಕಾರ ಹಾಗೂ ಪ್ರತಿಪಕ್ಷಗಳ ವಿರೋಧದ ನಡುವೆಯೂ ದೆಹಲಿ ಸೇವಾ ಮಸೂದೆಗೆ ಈಗ ರಾಷ್ಟ್ರಪತಿ ಅಂಕಿತ ಬಿದ್ದಿದೆ. ಇದರ ಜೊತೆಗೆ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೂ ಕೂಡ ಇಂದು ಸಹಿ ಹಾಕಿದ್ದು, ಕಾನೂನಾಗಿ ಜಾರಿಗೆ ಬರಲಿವೆ.

-masthmagaa.com

Contact Us for Advertisement

Leave a Reply