ವಿವಾದದ ನಡುವೆಯೂ ಒಂದೇ ದಿನಕ್ಕೆ 100ಕೋಟಿ ಕ್ಲಬ್‌ ಸೇರಿದ ಆದಿಪುರುಷ್‌!

masthmagaa.com:

ನಿನ್ನೆ (ಜೂನ್‌ 17) ತಾನೇ ಆದಿಪುರುಷ್‌ ಚಿತ್ರ ರಿಲೀಸ್‌ ಆಗಿದೆ. ಅನೇಕರು ಈ ಚಿತ್ರದ ಬಗ್ಗೆ ನೆಗೆಟೀವ್‌ ಕಾಮೆಂಟ್‌ ಮಾಡಿದ್ರೂ ಕೂಡ ಇನ್ನು ಕೆಲವರು ಪಾಸಿಟೀವ್‌ ಕಾಮೆಂಟ್‌ ಮಾಡಿದ್ದಾರೆ. ಒಂದಿಷ್ಟು ಜನರಿಗೆ ರಾವಣನ ಪಾತ್ರ, ವೇಷ ಭೂಷಣ ಇಷ್ಟ ಆಗದೇ ಇದ್ರೆ ಇನ್ನು ಕೆಲವರಿಗೆ ರಾಮನ ವೇಷ ಭೂಷಣ ಇಷ್ಟ ಆಗಿರಲಿಲ್ಲ. ಇಷ್ಟೆಲ್ಲಾ ನೆಗೆಟೀವ್‌ ಮತ್ತು ಪಾಸಿಟೀವ್‌ ರಿವ್ಯೂವ್‌ಗಳ ಮಧ್ಯ ಚಿತ್ರತಂಡ ಒಳ್ಳೆ ಯಶಸ್ಸನ್ನ ಪಡೆದಿರೋ ರೀತಿ ಕಾಣ್ತಾ ಇದೆ. ಆದಿಪುರುಷ್‌ ಚಿತ್ರ ಮೊದಲ ದಿನ ಕಲೆಕ್ಷನ್‌ ನೋಡಿ ಚಿತ್ರತಂಡ ಫುಲ್‌ ಖುಷ್‌ ಆಗಿದೆ.

ಆದಿಪುರುಷ್‌ ಚಿತ್ರ ಮೊದಲ ದಿನವೇ ಭಾರತದಲ್ಲಿ ಒಟ್ಟು 110ರಿಂದ 112 ಕೋಟಿ ಕಲೆಕ್ಷನ್‌ ಮಾಡಿದೆ. ಇನ್ನು ವಿಶ್ವದಾದ್ಯಂತ ಕಲೆಕ್ಷನ್‌ ನೋಡೋದಾದ್ರೆ ಟೋಟಲ್‌ 133 ಕೋಟಿ ರೂ. ಬಾಚಿಕೊಂಡಿದೆ. ಜೂನ್‌ 16 ಜೂನ್‌ 17ರಂದು ಒಳ್ಳೆ ಕಲೆಕ್ಷನ್‌ ಆಗೋ ನಿರೀಕ್ಷೆಯನ್ನ ಚಿತ್ರತಂಡ ಇಟ್ಕೊಂಡಿದೆ.

-masthmagaa.com

Contact Us for Advertisement

Leave a Reply