ಧೋನಿ ಈಗ ಸಿನಿಮಾದಲ್ಲೂ ಹೀರೋ : ಸಾಕ್ಷಿ ಏನಂದ್ರು ?

masthmagaa.com:

ಇಷ್ಟು ದಿನ ಕ್ರಿಕೆಟ್‌ಲ್ಲಿ ಮ್ಯಾಜಿಕ್‌ ಮಾಡಿದ ಕೂಲ್‌ ಕ್ಯಾಪ್ಟನ್‌ ಇದೀಗ ಸಿನಿಮಾದಲ್ಲಿ ಹೀರೋ ಆಗೋಕೆ ರೆಡಿಯಾಗಿದ್ದಾರೆ. ಈ ಬಗ್ಗೆ ಕೂಲ್‌ ಕ್ಯಾಪ್ಟನ್‌ ಧೋನಿ ಅವರ ಪತ್ನಿ ಸಾಕ್ಷಿ ಒಂದು ಹಿಂಟ್‌ ಕೊಟ್ಟಿದ್ದಾರೆ.

“ಒಳ್ಳೆಯ ಸ್ಕ್ರಿಪ್ಟ್ ಬಂದರೆ ಧೋನಿ ನಟಿಸುತ್ತಾರೆ. ಅವರಿಗೆ ಕ್ಯಾಮೆರಾ ಮುಂದೆ ನಿಲ್ಲೋಕೆ ಭಯ ಇಲ್ಲ. 2006ರಿಂದ ಧೋನಿ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಕ್ಯಾಮೆರಾ ಎದುರಿಸಿ ಅವರಿಗೆ ಅಭ್ಯಾಸ ಇದೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಅವರು ನಟಿಸ್ತಾರೆ” ಅಂತ ಸಾಕ್ಷಿ ಹೇಳಿದ್ದಾರೆ.

ಹಾಗಾದರೆ ಧೋನಿ ಯಾವ ರೀತಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಪ್ರಶ್ನೆಗೂ ಸಾಕ್ಷಿ ಬಳಿ ಉತ್ತರ ಇದೆ. “ಆ್ಯಕ್ಷನ್ ಸಿನಿಮಾ ಮಾಡುತ್ತಾರೆ. ಧೋನಿ ಯಾವಾಗ್ಲೂ ಆ್ಯಕ್ಷನ್ ಮೋಡ್​​ನಲ್ಲಿ ಇರ್ತಾರೆ” ಅಂತ ಸಾಕ್ಷಿ ಹೇಳಿದ್ದಾರೆ.

‘ಧೋನಿ ಎಂಟರ್​ಟೇನ್​ಮೆಂಟ್’ ಮೂಲಕ ಅವರು ತಮಿಳಿನಲ್ಲಿ ‘ಎಲ್​ಜಿಎಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಜುಲೈ 28ರಂದು ಥಿಯೇಟರ್​​ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಫ್ಯಾಮಿಲಿ ಎಂಟರ್​ಟೇನ್​ಮೆಂಟ್ ರೀತಿಯಲ್ಲಿ ಮೂಡಿ ಬಂದಿದೆ. ಈ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ನಧಿಯಾ, ಹರೀಶ್ ಕಲ್ಯಾಣ್​, ಆರ್​ಜೆ ವಿಜಯ್, ಯೋಗಿ ಬಾಬು ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Contact Us for Advertisement

Leave a Reply