ಸದ್ಯದಲ್ಲೆ ಬೆಂಗಳೂರು-ಕಾಂಬೋಡಿಯಾ ಮಧ್ಯೆ ನೇರ ವಿಮಾನ ಸಂಪರ್ಕ!

masthmagaa.com:

ಬೆಂಗಳೂರಿನಿಂದ ಆಸಿಯಾನ್‌ ರಾಷ್ಟ್ರ ಕಾಂಬೋಡಿಯಾಗೆ ನೇರ ವಿಮಾನ ಸಂಪರ್ಕ ಶುರುವಾಗೋ ಸಾಧ್ಯತೆ ಇದೆ. ಭಾರತ ಹಾಗೂ ಕಾಂಬೋಡಿಯಾಗಳ ಕಾನ್ಸುಲೇಟ್‌ ಕಛೇರಿಗಳಲ್ಲಿ ಈ ಬಗ್ಗೆ ಮಾತುಕತೆ ನಡೆದಿದೆ. ಜಗತ್ತಿನ ಅತಿ ದೊಡ್ಡ ದೇವಾಲಯ ಅಂತಾನೇ ಫೇಮಸ್ಸಾಗಿರೋ ಆಂಕರ್‌ವ್ಯಾಟ್‌ ದೇವಾಲಯ ಇದೇ ಕಾಂಬೋಡಿಯಾದಲ್ಲಿ ಇರೋದು. ಈಗಾಗ್ಲೆ ದೆಹಲಿ, ಕೊಲ್ಕತ್ತಾ, ಹೈದ್ರಾಬಾದ್‌, ಚೆನ್ನೈಗಳಿಂದ ಕಾಂಬೋಡಿಯಾಗೆ ಡೈರೆಕ್ಟ್‌ ಫ್ಲೈಟ್‌ ಇವೆ. ಟೂರಿಸ್ಮ್‌ ದೇಶ ಕಾಂಬೋಡಿಯಾಗೆ ಭೇಟಿ ಕೊಡೋ ಪ್ರವಾಸಿಗರ ಪೈಕಿ 1% ಜನರು ಭಾರತೀಯರೇ ಇದಾರೆ. ಅಲ್ಲದೆ ಇತ್ತೀಚೆಗೆ ರಿಲಾಯನ್ಸ್‌, ಒಬೆರಾಯ್‌ ಹೋಟೆಲ್‌ ಸೇರಿ ಭಾರತದ 500 ಕಂಪನಿಗಳು ಕಾಂಬೋಡಿಯಾಗೆ ಎಂಟ್ರಿ ಕೊಡೋಕೆ ಸಜ್ಜಾಗಿವೆ. ಇನ್ನು ವೀಸಾ ಇಲ್ಲದೆ ಭಾರತೀಯರು ಅಲ್ಲಿಗೆ ಟ್ರಾವೆಲ್‌ ಮಾಡಿ, ಅಲ್ಲಿ ಹೋದ್ಮೇಲೆ ವೀಸಾ ಪಡೀಬೋದು. ಸದ್ಯ ಮಾಲ್ಡೀವ್ಸ್‌ಗೆ ಆಲ್ಟರ್‌ನೇಟಿವ್‌ ಆಗಿ ಬೇರೆ ಬೇರೆ ಕಡೆ ಟ್ರಾವೆಲ್‌ ಮಾಡ್ತಿರೋ ಭಾರತೀಯರಿಗೆ ಥೈಲ್ಯಾಂಡ್‌, ಮಲೇಷ್ಯಾ, ಸಿಂಗಪೋರ್‌ಗೆ ಹತ್ರ ಆಗೋ ಕಾಂಬೋಡಿಯಾ ಒಳ್ಳೇ ಟೂರಿಸಂ ಸ್ಪಾಟ್‌ ಆಗ್ಬೋದು.

-masthmagaa.com

Contact Us for Advertisement

Leave a Reply