ವೈಟ್‌ ಹೌಸ್‌ನಲ್ಲಿ ದೀಪಾವಳಿ ಗಮ್ಮತ್ತು: ಪ್ರಮುಖರೊಂದಿಗೆ ಕಮಲಾ ಹ್ಯಾರಿಸ್‌ ಆಚರಣೆ

masthmagaa.com:

ಜಾಗತಿಕ ಹಬ್ಬವಾಗಿ ರೂಪುಗೊಳ್ತಾ ಇರೋ ದೀಪಾವಳಿಯನ್ನ ಇದೀಗ ಅಮೆರಿಕದ ಶಕ್ತಿಕೇಂದ್ರ ಶ್ವೇತಭವನದಲ್ಲಿ ಕೂಡ ಆಚರಣೆ ಮಾಡಲಾಗಿದೆ. ಭಾರತ ಮೂಲದ ಅಮೆರಿಕದ ಉಪರಾಷ್ಟ್ರಪತಿ, ಕಮಲಾ ಹ್ಯಾರಿಸ್‌ ವೈಟ್‌ ಹೌಸ್‌ನಲ್ಲಿ ನವೆಂಬರ್‌ 8 ಅಂದ್ರೆ ನೆನ್ನೆ ದೀಪಾವಳಿ ಆಚರಣೆಯ ಈವೆಂಟ್‌ನ್ನ ಹೋಸ್ಟ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಮತ್ತು ದಕ್ಷಿಣ ಏಷ್ಯಾ ಸಮುದಾಯದ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಈವೆಂಟ್‌ನಲ್ಲಿ ಮಾತನಾಡಿದ ಕಮಲ ಹ್ಯಾರಿಸ್‌ ದೀಪಾವಳಿ ಹಬ್ಬದ ಮಹತ್ವವನ್ನ ತಿಳಿಸಿದ್ದಾರೆ. ʻಜಗತ್ತಿನಾದ್ಯಂತ ಮನೆಮಾಡಿರೋ ವಿಷಮ ಪರಿಸ್ಥಿತಿಯ ಮಧ್ಯದಲ್ಲಿ ಈ ಬಾರಿ ದೀಪಾವಳಿಯನ್ನ ಆಚರಿಸಬೇಕಾಗಿದೆʼ ಅಂತ ಹೇಳಿದ್ದಾರೆ. ಈ ವೇಳೆ ವರ್ಲ್ಡ್‌ ಬ್ಯಾಂಕ್‌ನ ಅಧ್ಯಕ್ಷರಾದ ಅಜಯ್‌ ಬಂಗಾ, ನೆಟ್ಫ್ಲಿಕ್ಸ್‌ನ ಸಿಸಿಒ ಬೇಲಾ ಬಜಾರಿಯಾ, ಯುಎಸ್‌ ಪ್ರತಿನಿಧಿಗಳಾದ ರಾಜ ಕೃಷ್ಣಮೂರ್ತಿ ಮತ್ತು ಪೂಜಾ ಬಾವಿಶಿ ಮತ್ತು ಮಿಸ್‌ ಯುಎಸ್‌ಎ ನೀನಾ ದಾವುಲುರಿ ರಂತಹ ಪ್ರಮುಖರು ಅಗಮಿಸಿದ್ದರು. ಅಂದ್ಹಾಗೆ ಈ ಸಂದರ್ಭದಲ್ಲಿ ಕಮಲಾ ಹ್ಯಾರಿಸ್‌ ಅವ್ರ ಕಛೇರಿಯ ಮುಂದೆ ರಂಗೋಲಿ ಹಾಕಿ, ಹೂಗಳಿಂದ ಅಲಂಕಾರ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply