ಬಿಜೆಪಿಗೆ ಕರೆದ್ರು..ಹೋಗಲಿಲ್ಲ ಅಂತ ಜೈಲಿಗೆ ಹಾಕಿದ್ರು: ಡಿ.ಕೆ ಸುರೇಶ್

ಅಕ್ರಮ ಹಣ ವರ್ಗಾವಣೆ ಕೇಸ್‍ನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜೈಲಿನಲ್ಲಿದ್ದಾರೆ. ಆದ್ರೆ ಈಗ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಡಿ.ಕೆ ಶಿವಕುಮಾರ್‍ಗೆ ಬಿಜೆಪಿಯಿಂದ ಆಹ್ವಾನ ಬಂದಿತ್ತು ಅದನ್ನ ನಿರಾಕರಿಸಿದ್ದಕ್ಕೆ ಈಗ ಜೈಲು ಶಿಕ್ಷೆ ಅಂತ ಹೇಳಿದ್ದಾರೆ. ರಾಮನಗರದ ಕನಕಪುರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಇದು ನಿಮಗೆ ಕಡೆ ಎಚ್ಚರಿಕೆ. ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸಿದ್ದರು. ಆದ್ರೆ ಅದನ್ನು ನಿರಾಕರಿಸಿದ್ದರಿಂದ ಡಿ.ಕೆ. ಶಿವಕುಮಾರ್ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಅಂದ್ರು.

ಮುಂದುವರಿದು ಮಾತನಾಡಿದ ಅವರು, ಇಂದು ಇ.ಡಿ, ಐ.ಟಿ, ಸಿಬಿಐ ಸೇರಿದಂತೆ ದೇಶದ ಇಡೀ ವ್ಯವಸ್ಥೆಯೇ ಬಿಜೆಪಿಯ ಕೈವಶದಲ್ಲಿದೆ. ಆದ್ರೆ ಕೋರ್ಟ್ ಮೇಲೆ ಮಾತ್ರ ನಮಗೆ ವಿಶ್ವಾಸ ಇದೆ. ಹೀಗಾಗಿ ಜಾಮಿನು ಸಿಗುವ ನಿರೀಕ್ಷೆಯಿದ್ದು, ಉಳಿದೆಲ್ಲಾ ಸಂಸ್ಥೆಗಳು ಬಿಜೆಪಿ ಪಾಲಾಗಿವೆ ಅಂದ್ರು. ಜೊತೆಗೆ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ ಮೇಲೆ ಊಹಾಪೋಹದ ಸುದ್ದಿ ಪ್ರಕಟಿಸಿವೆ. ಎಲ್ಲ ಟಿ.ವಿಗಳ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.

Contact Us for Advertisement

Leave a Reply