ಹಂದಿ ಮಾಂಸದ ಅನುಮಾನಕ್ಕೆ ಮಾಂಸ ರಫ್ತುದಾರರಿಂದ DNA ಪರೀಕ್ಷೆ!

masthmagaa.com:

ಮಾಂಸ ಮತ್ತು ಮಾಂಸದ ಉತ್ಪನ್ನಗಳಿಗೆ ಹಲಾಲ್‌ ಕಟ್‌ ಮಾಡೋದು ಈಗ ಹೆಚ್ತಿರೋ ಹಿನ್ನಲೆ ಹೈದರಾಬಾದ್‌ನ ಮಾಂಸ ರಫ್ತುದಾರರು ತಮ್ಮ ಉತ್ಪನ್ನಗಳನ್ನ ಡಿಎನ್‌ಎ ಟೆಸ್ಟ್‌ಗೆ ಒಳಪಡಿಸೋಕೆ ಮುಂದಾಗಿದ್ದಾರೆ. ಉತ್ಪನ್ನದಲ್ಲಿ ಹಂದಿ ಮಾಂಸ ಬೆರೆತಿದೆಯಾ ಇಲ್ವಾ ಅನ್ನೊದನ್ನ ಪ್ರಮಾಣೀಕರಿಸಲು ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರ (NRCM)ನಲ್ಲಿ ಇದನ್ನ ಪರೀಕ್ಷೆಗೆ ಒಳಪಡಿಸಲಾಗ್ತಿದೆ. ಹಲಾಲ್‌ ದೃಢೀಕರಿಸಲು ತಮ್ಮ ಲ್ಯಾಬ್‌ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಅನಮತಿ ಪಡೆದಿದೆ. ಯಾವುದೇ ಉತ್ಪನ್ನದಲ್ಲಿ ಮಾಂಸ ಸೇರಿದೆಯಾ ಇಲ್ವಾ ಅನ್ನೋದನ್ನ ಪರೀಕ್ಷಿಸಬಹುದು. ನಾವು ಕೊಡುವ ರಿಪೋರ್ಟ್‌ ಜಾಗತಿಕವಾಗಿ ಸ್ವೀಕರಿಸಲ್ಪಡುತ್ತವೆ ಅಂತ NRCMನ ವಿಜ್ಞಾನಿ ವಿಷ್ಣುರಾಜ್‌ ಹೇಳಿದ್ದಾರೆ. ಈ ಸರ್ಟಿಫಿಕೇಟ್‌ ಇಟ್ಕೊಂಡು ರಫ್ತುದಾರರು ತಮ್ಮ ಉತ್ಪನ್ನಗಳನ್ನ ಹಲಾಲ್‌ ಉತ್ಪನ್ನ ಅಂತ ಮಾರಾಟ ಮಾಡಬಹುದು ಅಂತ ಹೇಳಿದ್ದಾರೆ. ಇನ್ನು ಮಲೇಷಿಯಾ ಮತ್ತು ಇಂಡೋನೇಷ್ಯಾದಂತ ಕೆಲ ದೇಶಗಳಿಗೆ ಆಹಾರ ಅಥ್ವಾ ಆಹಾರೇತರ ಉತ್ಪನ್ನಗಳ ರಫ್ತಿಗೆ ಹಲಾಲ್‌ ಪ್ರಮಾಣೀಕರಣದ ಅಗತ್ಯವಿದೆ. ಹೀಗಾಗಿ ರಫ್ತುದಾರರು ಆಹಾರದ ಪರೀಕ್ಷೆಗೆ ಮುಂದಾಗಿದ್ದಾರೆ.

-masthmagaa.com

Contact Us for Advertisement

Leave a Reply