ಟ್ರಂಪ್‌ ಉಪಾಧ್ಯಕ್ಷರ ಆಯ್ಕೆಯಲ್ಲಿ ವಿವೇಕ್‌ ರಾಮಸ್ವಾಮಿ ಹೆಸರು!

masthmagaa.com:

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಈಗನಿಂದಲೇ ರಂಗೇರ್ತಾ ಇದೆ. ರಿಪಬ್ಲಿಕನ್‌ ಪಾರ್ಟಿಯಿಂದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸ್ರು ಕೇಳಿ ಬರ್ತಿದ್ರೆ, ಡೆಮಾಕ್ರೆಟಿಕ್‌ ಪಕ್ಷದಿಂದ ಮತ್ತೆ ಜೋ ಬೈಡನ್‌ ಹೆಸ್ರು ಮುನ್ನಲೆಗೆ ಬರ್ತಿದೆ. ಈ ನಡುವೆಯೇ ಟ್ರಂಪ್‌ ಪಕ್ಷದ ಉಪಾಧ್ಯಕ್ಷರ ರೇಸ್‌ನಲ್ಲಿ ಯಾರು ಕಣಕ್ಕಿಳಿಯುತ್ತಾರೆ ಅನ್ನೋ ಪ್ರಶ್ನೆಗಳು ಜಾಸ್ತಿಯಾಗ್ತಿವೆ. ಇದಕ್ಕೆ ಈಗ ಟ್ರಂಪ್‌ ಅವರೇ ಉತ್ತರ ನೀಡಿದ್ದಾರೆ. ಟ್ರಂಪ್‌ ಟಾಪ್‌ 6 ಉಪಾಧ್ಯಕ್ಷ ಅಭ್ಯರ್ಥಿಗಳನ್ನ ಹೇಳಿದ್ದು, ಅದರಲ್ಲಿ ವಿವೇಕ್‌ ರಾಮಸ್ವಾಮಿಯವರ ಹೆಸರೂ ಇದೆ. ಅಮೆರಿಕದ ನ್ಯೂಸ್ ಚಾನೆಲ್‌ ಒಂದ್ರ ಇಂಟರ್‌ವ್ಯೂನಲ್ಲಿ ಟ್ರಂಪ್‌‌ ಅವರನ್ನ ನಿಮ್ಮ ಪಕ್ಷದಲ್ಲಿ ಉಪಾಧ್ಯಕ್ಷ ಆಕಾಂಕ್ಷಿಯ ಶಾರ್ಟ್‌ಲಿಸ್ಟ್‌ ಕೊಡಿ… ಒಂದ್‌ ಆರು ಜನರನ್ನ ಹೆಸರಿಸಿ ಅಂತ ಕೇಳಲಾಗಿತ್ತು. ಈ ವೇಳೆ ಟ್ರಂಪ್‌, ತುಳಸಿ ಮತ್ತು ವಿವೇಕ್‌ ರಾಮಸ್ವಾಮಿ ಅವ್ರ ಹೆಸರನ್ನೂ ಕೂಡ ಹೇಳಿದ್ದಾರೆ. ಅಂದ್ಹಾಗೆ ವಿವೇಕ್‌ ರಾಮಸ್ವಾಮಿ ಅವ್ರು ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೇ ಸ್ಪರ್ಧೆ ಮಾಡೋ ಆಸೆ ಹೊಂದಿದ್ರು. ಆದ್ರೆ ರಿಪಬ್ಲಿಕನ್‌ ಅಭ್ಯರ್ಥಿಯ ಆಯ್ಕೆಗೆ ನಡೆಸಲಾಗಿದ್ದ ಮೊದಲ ವೋಟಿಂಗ್‌ನಲ್ಲಿ ವಿವೇಕ್‌ ರಾಮಸ್ವಾಮಿಗೆ ಹಿನ್ನಡೆಯಾಗಿತ್ತು. ಸೋ ಅವ್ರು ಅವಾಗ್ಲೇ ಚುನಾವಣಾ ಕಣದಿಂದ ಹೊರಗೆ ಬಂದ್ರು. ಬದಲಾಗಿ ತಮಗೆ ಪೈಪೋಟಿಯಾಗಿ ನಿಂತಿದ್ದ ಟ್ರಂಪ್‌ರನ್ನ ಹಾಡಿ ಹೊಗಳಿದ್ರು. ಇವ್ರೇ ಮುಂದಿನ ಅಮೆರಿಕದ ಅಧ್ಯಕ್ಷರು ಅಂತ ಹೇಳಿದ್ರು. ಟ್ರಂಪ್‌ ಈಗ ವಿವೇಕ್‌ ಅವರ ಹೆಸರನ್ನೂ ಉಪಾಧ್ಯಕ್ಷ ಆಕಾಂಕ್ಷಿಯ ಪಟ್ಟಿಗೆ ಸೇರಿಸಿದ್ದಾರೆ.

-masthmagaa.com

Contact Us for Advertisement

Leave a Reply