ನಿಕ್ಕಿ ಹ್ಯಾಲೆ ಭದ್ರಕೋಟೆಯಲ್ಲಿ ಡೊನಾಲ್ಡ್‌ ಟ್ರಂಪ್‌ಗೆ ಭರ್ಜರಿ ಜಯ!

masthmagaa.com:

‌ಅಮೆರಿಕದಲ್ಲಿ ಈಗಾಗ್ಲೆ ರಿಪಬ್ಲಿಕನ್‌ ಪಾರ್ಟಿಯ ಪ್ರೆಸಿಡೆಂಶಿಯಲ್‌ ಕ್ಯಾಂಡಿಡೇಟ್‌ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅನ್ನೋದು ಆಲ್ಮೋಸ್ಟ್‌ ಫಿಕ್ಸ್‌ ಆಗಿದೆ. ಇದರ ಮಧ್ಯೆ ಸೌತ್‌ ಕ್ಯಾರೋಲಿನಾ ರಾಜ್ಯದ ಪ್ರೈಮರಿ ಎಲೆಕ್ಷನ್‌ನಲ್ಲೂ ಟ್ರಂಪ್‌ ನಿಕ್ಕಿ ಹ್ಯಾಲೆರನ್ನ ಸೋಲಿಸಿದ್ದಾರೆ. ಆ ಮೂಲಕ ಟ್ರಂಪ್‌ ಹ್ಯಾಟ್ರಿಕ್‌ ಹೊಡಿಯೋದು.. ಅಂದ್ರೆ ಸತತ ಮೂರನೇ ಬಾರಿಗೆ ರಿಪಬ್ಲಿಕನ್‌ ಕ್ಯಾಂಡಿಡೇಟ್‌ ಆಗೋದು ಕನ್ಫರ್ಮ್‌ ಎನ್ನಲಾಗ್ತಿದೆ. ಅಲ್ಲದೆ‌ ಈ ಸೌತ್‌ ಕ್ಯಾರೊಲೀನ ನಿಕ್ಕಿ ಹ್ಯಾಲೆರ ಭದ್ರಕೋಟೆ. ಆ ರಾಜ್ಯದಲ್ಲಿ ನಿಕ್ಕಿ ಎರಡು ಬಾರಿ ಗವರ್ನರ್‌ ಆಗಿದ್ರು. ಆದ್ರೆ ಎವರ್‌ ಕಾಂಟ್ರೊವರ್ಶಿಯಲ್‌, ಹತ್ತಾರು ಆರೋಪಗಳನ್ನ ತಲೆ ಮೇಲೆ ಹೊತ್ಕೊಂಡಿರೋ ಟ್ರಂಪ್‌ಗೆ, ಮತ್ತೊಮ್ಮೆ ಅಮೆರಿಕದ ಭಾರವನ್ನ ಹೊರಿಸೋಕೆ ಅಲ್ಲಿನ ಜನ ಸಜ್ಜಾಗಿರೋ ತರ ಕಾಣ್ತಿದೆ.

-masthmagaa.com

Contact Us for Advertisement

Leave a Reply