ನ್ಯಾಟೋ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ರಷ್ಯಾಗೆ ಟ್ರಂಪ್‌ ಪ್ರೋತ್ಸಾಹ!

masthmagaa.com:

ಯುಕ್ರೇನ್‌ ವಿರುದ್ಧ ಬಿಡದೇ ದಾಳಿ ನಡೆಸ್ತಿರೋ ರಷ್ಯಾಗೆ ಇದೀಗ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಚೋದನೆ ನೀಡೋ ಹಾಗೇ ಹೇಳಿಕೆ ನೀಡಿದ್ದಾರೆ. ನ್ಯಾಟೋ ರಾಷ್ಟ್ರಗಳ ಮೇಲೆ ದಾಳಿ ನಡೆಸೋಕೆ ಎನ್‌ಕರೇಜ್‌ ಮಾಡಿದ್ದಾರೆ. ತಮ್ಮ ಚುನಾವಣಾ ರ‍್ಯಾಲಿ ವೇಳೆ ಮಾತನಾಡಿದ ಅವ್ರು, ʻಪೇಮೆಂಟ್‌ ಮಾಡದ ಯಾವ್ದೇ ನ್ಯಾಟೋ ರಾಷ್ಟ್ರಗಳ ಮೇಲೆ ರಷ್ಯಾ ದಾಳಿ ನಡೆಸಿದ್ರೆ.. ನಾನ್‌ ಅದಕ್ಕೆ ಪ್ರೋತ್ಸಾಹಿಸ್ತೇನೆ. ಸೇನಾ ಮೈತ್ರಿಗೆ ಪಾವತಿಸಬೇಕಾದ ಹಣವನ್ನ ನೀಡದ ನ್ಯಾಟೋ ರಾಷ್ಟ್ರಗಳಿಗೆ ರಷ್ಯಾ ಏನ್‌ ಬೇಕಾದ್ರು ಮಾಡಿ ಸಾಯಲಿʼ ಅಂತ ಐ ಡೋಂಟ್‌ ಕೇರ್‌ ಅನ್ನೋ ರೀತಿಯಲ್ಲಿ ಹೇಳಿದ್ದಾರೆ. ಅಂದ್ಹಾಗೆ ಯುಕ್ರೇನ್‌ ಮೇಲೆ ಕಣ್ಣಿಟ್ಟಿರೋ ರಷ್ಯಾ, ಇನ್ನಿತರೆ ನ್ಯಾಟೋ ರಾಷ್ಟ್ರಗಳ ಮೇಲೆ ದಾಳಿಗೆ ಮುಂದಾಗುತ್ತಾ ಅನ್ನೋ ಕಳವಳ ನ್ಯಾಟೋ ರಾಷ್ಟ್ರಗಳಲ್ಲಿದೆ. ಇದ್ರ ಮಧ್ಯೆಯೇ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಟ್ರಂಪ್‌ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply