ನ್ಯಾಟೋ ದೇಶಗಳನ್ನ ಪುಟಿನ್‌ ಬಾಯಿಗೆ ಹಾಕ್ತೀನಿ ಅಂತ ಡೊನಾಲ್ಡ್‌ ಟ್ರಂಪ್!

masthmagaa.com:

ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೊಟ್ಟಿದ್ದ ಹೇಳಿಕೆಯೊಂದು ನ್ಯಾಟೋ ದೇಶಗಳಿಗೆ ಜೀವಭಯ ತರಿಸಿದೆ. ನ್ಯಾಟೋ ದೇಶಗಳು ಅಮೆರಿಕಗೆ ರಕ್ಷಣಾ ಫಂಡ್‌ ಅಥ್ವಾ ಪ್ರೊಟೆಕ್ಷನ್‌ ಮನಿ ಕೊಡ್ಲಿಲ್ಲ ಅಂದ್ರೆ, ದೇಶಗಳು ನ್ಯಾಟೋದಲ್ಲಿ ತಮ್ಮ ತಮ್ಮ ಆರ್ಥಿಕ ಕಮಿಟ್‌ಮೆಂಟ್‌ಗಳನ್ನ ಕಂಪ್ಲೀಟ್‌ ಮಾಡಿಲ್ಲ ಅಂದ್ರೆ, ರಷ್ಯಾದ ಬಸ್‌ ಕೆಳಗೆ ನಾವು ನ್ಯಾಟೋ ಸದಸ್ಯ ದೇಶಗಳನ್ನ ತಳ್ತೀವಿ ಅಂದಿದ್ರು. ಆ ಮೂಲಕ ರಷ್ಯಾ ಏನಾದ್ರು ದಾಳಿ ಮಾಡಿದ್ರೆ ಅಮೆರಿಕ ಸಪೋರ್ಟ್‌ ಮಾಡ್ಬಾರ್ದು. ಎಲ್ಲಾ ದೇಶಗಳು ʻಬಿಲ್ʼ ಕಟ್ಟೋದು ಮುಖ್ಯ ಅಂದಿದ್ರು. ಇದೀಗ ಈ ಹೇಳಿಕೆ ವಿರುದ್ಧ ನ್ಯಾಟೋ ಚೀಫ್‌ ಜೆನ್ಸ್‌ ಸ್ಟಾಲ್ಟನ್‌ಬರ್ಗ್‌ ಕಿಡಿಕಾರಿದ್ದಾರೆ. ಟ್ರಂಪ್‌ರ ಈ ಹೇಳಿಕೆ ಅಮೆರಿಕ ಹಾಗೂ ಯುರೋಪಿಯನ್‌ ದೇಶಗಳ ಜನರ ಜೀವಗಳನ್ನ ಅಪಾಯಕ್ಕೆ ಸಿಲುಕಿಸುತ್ತೆ. ಯಾವುದೇ ದೇಶದ ಮೇಲೆ ದಾಳಿಯಾದ್ರೂ ಅದಕ್ಕೆ ನಾವು ಸ್ಟ್ರಾಂಗಾದ ಪ್ರತಿಕ್ರಿಯೆ ಕೊಡ್ತೀವಿ. ಈ ಬಾರಿ ಅಮೆರಿಕ ಚುನಾವಣೆಯಲ್ಲಿ ಯಾರೇ ಗೆದ್ರು, ಅಮೆರಿಕ ಒಂದು ಸ್ಟ್ರಾಂಗ್‌ ಹಾಗೂ ಬದ್ಧ ನ್ಯಾಟೋ ರಾಷ್ಟ್ರವಾಗಿರತ್ತೆ ಅಂದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಟ್ರಂಪ್‌ ಮಾತುಗಳು ಡೇಂಜರಸ್‌ ಹಾಗೂ ಬೇಜವಾಬ್ದಾರಿತನದಿಂದ ತುಂಬಿವೆ. ಈ ಮಾತುಗಳಿಂದ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಹೆಚ್ಚಿನ ಅಶಾಂತಿ, ಯುದ್ಧ ಮಾಡೋಕೆ ಗ್ರೀನ್‌ ಸಿಗ್ನಲ್‌ ಕೊಟ್ಟಂಗ್‌ ಇರುತ್ತೆ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply