ಅಮೆರಿಕದಲ್ಲಿ ಟ್ರಂಪ್‌ ಭರ್ಜರಿ ಪ್ರಚಾರ! ಪ್ರಜಾಪ್ರಭುತ್ವ ಬಗ್ಗೆ ಹೇಳಿಕೆ!

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿರೋ‌ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಅಮೆರಿಕ ಪ್ರಜಾಪ್ರಭುತ್ವ ಕುರಿತು ಮಾತನಾಡಿದ್ದಾರೆ. ʻಮುಂಬರೋ ಚುನಾವಣೆಯಲ್ಲಿ ನಾನು ಗೆಲ್ದೇ ಹೋದ್ರೆ ಅಮೆರಿಕದ ಪ್ರಜಾಪ್ರಭುತ್ವ ಕೊನೆಯಾಗೋ ಸಾಧ್ಯತೆಯಿದೆʼ ಅಂದಿದ್ದಾರೆ. ಅಮೆರಿಕದಲ್ಲಿ ಮುಂದೆ ಚುನಾವಣೆ ಆಗೋದು ಡೌಟು. ನನಗೇನು ಚುನಾವಣೆ ನಡೆಯುತ್ತೆ ಅಂತ ಅನ್ಸಲ್ಲ. ನಾನು ಗೆಲ್ಲದಿದ್ರೆ ಅಮೆರಿಕದ ಪ್ರಜಾಪ್ರಭುತ್ವ ಇಲ್ಲಿಗೆ ಕೊನೆಯಾಗೋ ಸಾಧ್ಯತೆಯಿದೆ. ಇಡೀ ದೇಶ ರಕ್ತದಲ್ಲಿ ಸ್ನಾನ ಮಾಡ್ಬೇಕಾಗುತ್ತೆʼ ಅಂತ ಟ್ರಂಪ್‌ ಹೇಳಿದ್ದಾರೆ. ಜೊತೆಗೆ 2020ರ ಚುನಾವಣೆಯಲ್ಲಿ ಅಕ್ರಮ ನಡೆದಿರೋದರಿಂದಲೇ ನಾನು ಜೋ ಬೈಡನ್‌ ವಿರುದ್ಧ ಸೋಲಬೇಕಾಯ್ತು ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply