ವಂಚನೆ ಕೇಸ್ ತೀರ್ಪಿನಿಂದ ಟ್ರಂಪ್‌ ಆರ್ಥಿಕತೆಗೆ ದೊಡ್ಡ ಹೊಡೆತ!

masthmagaa.com:

ವಂಚನೆ ಪ್ರಕರಣವೊಂದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತವರ ಸಂಸ್ಥೆಗೆ 355 ಮಿಲಿಯನ್‌ ಡಾಲರ್‌ ಅಂದ್ರೆ ಬರೊಬ್ಬರಿ 2,946.5 ಕೋಟಿ ರೂಪಾಯಿಗಳ ಭಾರಿ ದಂಡ ವಿಧಿಸಲಾಗಿದೆ. ಇನ್ನು ಈ ಆದೇಶ ನೀಡಿರೋ ನ್ಯೂಯಾರ್ಕ್‌ ಕೋರ್ಟ್‌ 3 ವರ್ಷ ಯಾವುದೇ ಕಾರ್ಪೊರೇಶನ್ ಕಂಪನಿ ನಿರ್ದೇಶಕರಾಗಿ ಕೆಲ್ಸ ಮಾಡದಂತೆ‌ ಟ್ರಂಪ್‌ಗೆ ಘೇರಾವ್‌ ಕೂಡ ಹಾಕಿದೆ. ಅಲ್ದೇ ಟ್ರಂಪ್‌ರ ಇಬ್ಬರು ಮಕ್ಕಳಿಗೆ ತಲಾ 4 ಮಿಲಿಯನ್‌ ಡಾಲರ್ ಅಂದ್ರೆ‌ 33.2 ಕೋಟಿ ರೂಪಾಯಿ ಫೈನ್‌ ಹಾಕಿ, ಎರಡು ವರ್ಷ ನಿರ್ದೇಶಕರಾಗಿ ಕೆಲ್ಸ ಮಾಡದಂತೆ ಕೋರ್ಟ್‌ ಆದೇಶ ನೀಡಿದೆ. ಆದ್ರೆ ನನ್ನ ಮೇಲಿನ ರಾಜಕೀಯ ಷಡ್ಯಂತ್ರದಿಂದ ಹೀಗೆ ಮಾಡಲಾಗಿದೆ ಅಂತ ಟ್ರಂಪ್‌ ಆಕ್ರೋಶ ಹೊರಹಾಕಿದ್ದಾರೆ. ಅಂದ್ಹಾಗೆ ವಂಚನೆ ಪ್ರಕರಣದ ವಿಚಾರವಾಗಿ 2ವರೆ ತಿಂಗಳ ಹಿಂದೆ ವಿಚಾರಣೆಗೆ ನಡೆಸಿದ್ದ ನ್ಯೂಯಾರ್ಕ್‌ ಕೋರ್ಟ್‌ ಇದೀಗ ಈ ತೀರ್ಪಿನ ಮೂಲಕ ಟ್ರಂಪ್‌ಗೆ ಬಿಗ್‌ ಶಾಕ್‌ನೀಡಿದೆ.

-masthmagaa.com

Contact Us for Advertisement

Leave a Reply