ದೇಶ ಬಿಡಲು ಡಂಕಿ ಫ್ಲೈಟ್‌ ಹತ್ತಿದೋರ ಕಳ್ಳಾಟ ಬಯಲು!

masthmagaa.com:

ಡಂಕಿ ಫ್ಲೈಟ್‌ ಅಂದ್ರೆ ಭಾರತದ ವಲಸಿಗರನ್ನ ಹೊತ್ತು ನಿಕರಾಗುವಾ ಕಡೆಗೆ ಹೋಗ್ಬೇಕಿದ್ದ ಫ್ಲೈಟ್…‌ ಶಾರುಖ್‌ ಖಾನ್‌ರ ಡಂಕಿ ಚಿತ್ರಾನೂ ವಲಸಿಗರ ಕಥಾ ಹಂದರವನ್ನ ಹೊಂದಿದೆಯಂತೆ.. ಸೋ ಈ ಫ್ಲೈಟ್‌ಗೆ DONKEY ಅಥ್ವಾ ಡಂಕಿ ಫ್ಲೈಟ್‌ ಅಂತಿದ್ದಾರೆ. ಡಿಸೆಂಬರ್‌ 26ರ ಬೆಳಿಗ್ಗೆ ವಿಮಾನ ಮುಂಬೈಗೆ ಬಂದಿಳೀತು. ದೇಶ ಬಿಟ್ಟು ಅಮೆರಿಕ ಸೇರ್ಕೊಳ್ಳೋಕೆ ಅಕ್ರಮವಾಗಿ ಹೊರಟಿದ್ದೋರೆಲ್ಲ ತಮ್ಮ ಮುಖಗಳ್ನ ಮುಚ್ಕೊಂಡು… ಎಲ್ಲಿ ಪಾಪರಾಜಿಗಳು ತಮ್ಮ ಮುಖ ರಿವೀಲ್‌ ಮಾಡಿ ಮಾನ ತಗೀತಾರೋ ಅಂತ ಮಾಸ್ಕು ಬಟ್ಟೆ ಎಲ್ಲ ಸುತ್ಕೊಂಡು ಬಂದ್ರು. ಇವರಲ್ಲಿ ಕೆಲವರು ನಿಕರಾಗುವಾ ಟೂರ್‌ ಪ್ಯಾಕೇಜ್‌ಗೆ ಹಣ ಕೊಟ್ಟಿದ್ದೀವಿ, ಬರಲ್ಲ ಅಂತೇಳಿದ್ರೆ, ಇನ್ನೂ ಕೆಲವರು ನಿಕರಾಗುವಾದಿಂದ ವಾಪಸ್‌ ಬರೋಕೆ ರಿಟರ್ನ್‌ ಟಿಕೆಟ್‌ ಬುಕ್‌ ಮಾಡಿರ್ಲಿಲ್ಲ. ಅವರಿಗೆ ಭಾರತಕ್ಕೆ ವಾಪಸ್‌ ಬರೋಕೆ ಇಷ್ಟ ಇರ್ಲಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಮಂಗಳವಾರ ಫ್ರಾನ್ಸ್‌ ಕೋರ್ಟ್‌ ಈ ವಿಮಾನ ಹಾರಾಟಕ್ಕೆ ಗ್ರೀನ್‌ ಸಿಗ್ನಲ್‌ ಕೊಡ್ತು. ಆದ್ರೆ ನಿಕರಾಗುವಾ ಆಗ್ಲಿ, UAE ಆಗ್ಲಿ ಈ ವಿಮಾನ ಬರ್ಲಿ ಅಂತ ಹೇಳಲಿಲ್ಲ. ಭಾರತ ಮಾತ್ರ ಸಹಾಯಕ್ಕೆ ಬಂದು ಮುಂಬೈಗೆ ಬರೋಕೆ ದಾರಿ ಮಾಡ್ಕೊಟ್ಟಿದೆ ಅಂತ ಗೊತ್ತಾಗ್ತಿದೆ. ವಾಪಸ್‌ ಬಂದ 276 ಮಂದಿಯಲ್ಲಿ ಹತತ್ರ ನೂರು ಮಂದಿ ಪಂಜಾಬ್‌ನವರಿದ್ರು. 60ಕ್ಕೂ ಹೆಚ್ಚು ಮಂದಿ ಗುಜರಾತ್‌ನವ್ರಿದ್ರು ಅಂತ ತಿಳಿದು ಬಂದಿದೆ. ಈ ವಿಮಾನ ಆಪರೇಟ್‌ ಮಾಡ್ತಿದ್ದ ಲೆಜೆಂಡ್ ಏರ್‌ಲೈನ್ಸ್‌ ಸಂಸ್ಥೆ, ಒಂದು ನಾನ್‌ ಯುರೋಪಿಯನ್‌ ಕಂಪನಿ‌ ಈ ವಿಮಾನವನ್ನ ಬುಕ್‌ ಮಾಡಿತ್ತು. ಇದು ಭಾರತದ್ದಾ, ಅಲ್ವಾ ಅಂತ ನಾವು ಡಿಸ್‌ಕ್ಲೋಸ್‌ ಮಾಡಲ್ಲ ಅಂತೇಳಿದೆ.

-masthmagaa.com

Contact Us for Advertisement

Leave a Reply