ತಾಲಿಬಾನ್ ಸರ್ಕಾರ ಸೇರಲು ಗಡ್ಡ ಬಿಟ್ಟು, ಅಫ್ಘನ್ ಡ್ರೆಸ್ ಹೊಲಿಸುತ್ತಿರೋ ಜನ!

masthmagaa.com:

ಈ ಹಿಂದಿನ ಸರ್ಕಾರದಲ್ಲಿದ್ದ ನೌಕರರಿಗೆ ಕೆಲಸಕ್ಕೆ ಬರುವಂತೆ ಮತ್ತೆ ತಾಲಿಬಾನಿಗಳು ಸೂಚಿಸ್ತಿದ್ದಾರೆ. ಈ ಹಿಂದೆ ಇದೇ ರೀತಿ ಹೇಳಿದ್ದ ತಾಲಿಬಾನಿಗಳು, ಕೆಲಸಕ್ಕೆ ಹೋದ್ರೆ ತಡೆದು ವಾಪಸ್ ಕಳುಹಿಸ್ತಿದ್ದಾರೆ ಅಂತ ಕಳೆದ ಶನಿವಾರ ವರದಿಯಾಗಿತ್ತು. ಇದೀಗ ಅಫ್ಘಾನಿಸ್ತಾನದ ಹಣಕಾಸು ಇಲಾಖೆಯಲ್ಲಿ ಆರ್ಥಿಕ ತಜ್ಞರಾಗಿದ್ದ ಅಶ್ರಫ್ ಹೈದರಿಗೆ ಕರೆ ಮಾಡಿರೋ ತಾಲಿಬಾನಿಗಳು, ಈ ಕ್ರೇಜಿ ಫಾರಿನರ್​ಗಳು ಹೋದ ಬಳಿಕ ಕೆಲಸಕ್ಕೆ ಬರುವಂತೆ ಕಮಾಂಡರ್ ಆದೇಶಿಸಿದ್ದಾರೆ ಅಂತ ಹೇಳಿದ್ದಾರೆ. ಹೀಗಾಗಿ ಅಶ್ರಫ್ ಹೈದರಿ ಈಗ ಹಿಂದಿನ ತಾಲಿಬಾನ್ ರೂಲ್ಸ್​​​ನಲ್ಲಿದ್ದ ಎಲ್ಲಾ ನಿಯಮಗಳನ್ನು ಪಾಲಿಸೋಕೆ ರೆಡಿಯಾಗ್ತಿದ್ದಾರೆ. ಈಗಾಗಲೇ ಗಡ್ಡ ಬಿಡೋಕೆ ಶುರು ಮಾಡಿದ್ದು, ಸೂಟ್ ಬದಲಿಗೆ ಅಪ್ಘಾನಿಸ್ತಾನ ಶೈಲಿಯ ಉದ್ದುದ ಜುಬ್ಬ ಪೈಜಾಮ ರೀತಿಯ ಬಟ್ಟೆ ಹೊಲಿಸಿಕೊಳ್ತಿದ್ದಾರೆ. ಇನ್ನು ಹಣಕಾಸು ಇಲಾಖೆಯ ರೆವೆನ್ಯೂ ವಿಭಾಗದಲ್ಲಿರೋ ಸೊಹ್ರಬ್ ಸಿಕಂದರ್​​, ನಾನು ಕಚೇರಿಗೆ ವಾಪಸ್ ಬಂದ ಬಳಿಕ ಒಬ್ಬೇ ಒಬ್ಬ ಮಹಿಳಾ ಸಹೋದ್ಯೋಗಿಯನ್ನು ನೋಡಿಲ್ಲ ಅಂತ ಹೇಳಿದ್ದಾರೆ. ಇತ್ತೀಚೆಗಷ್ಟೇ ಈ ಬಗ್ಗೆ ಪ್ರತಿಕ್ರಿಯಿಸಿದ್ದ ತಾಲಿಬಾನಿಗಳು, ಈಗ ಜನ ದೇಶಕ್ಕಾಗಿ ಕೆಲಸ ಮಾಡೋಕೆ ಟೈಂ ಬಂದಿದೆ. ಸರ್ಕಾರದ ಮಹಿಳಾ ನೌಕರರು ಕೆಲಸಕ್ಕೆ ಬರಲು ಕೆಲವೊಂದು ರೂಲ್ಸ್ ರೆಡಿ ಮಾಡ್ತಿದ್ದೀವಿ. ಆದ್ರೆ ಈಗ ಭದ್ರತಾ ಕಾರಣದಿಂದಾಗಿ ಅವರು ಮನೆಯಲ್ಲೇ ಇರಬೇಕು ಅಂತ ತಿಳಿಸಿತ್ತು.

-masthmagaa.com

Contact Us for Advertisement

Leave a Reply