ಪೋಷಕರಿಂದ ತೊರೆಯಲ್ಪಟ್ಟ ನವಜಾತ ಶಿಶುಗಳ ರಕ್ಷಣೆಗೆ ಅಧಿಕಾರಿಗಳು ಮಾಡಿದ್ದೇನು ಗೊತ್ತಾ?

masthmagaa.com:

ಹೆಣ್ಣು ಮಗು ಅಂತಾನೋ ಅಥವಾ ಸಾಕಲು ಸಾಧ್ಯವಾಗಲ್ಲ ಅಂತಾನೋ ಅಥ್ವಾ ಅಕ್ರಮ ಸಂಬಂಧದಿಂದ ಹುಟ್ಟಿರೋ ಕಾರಣಕ್ಕೆ ನವಜಾತ ಶಿಶುಗಳನ್ನ ಕಸದ ಬುಟ್ಟಿಯಲ್ಲಿ ಹಾಗೂ ಚರಂಡಿ ಬದಿಯಲ್ಲಿ ಎಸೆದು ಹೋಗುವ ಹಲವು ಪ್ರಕರಣಗಳನ್ನ ನಾವು ನೋಡ್ತಾ ಇರ್ತೀವಿ. ಈ ರೀತಿ ಬಿಟ್ಟು ಹೋಗಲಾದ ಮಗುವನ್ನ ನಾಯಿ ಕಚ್ಚಿಕೊಂಡು ಹೋಗೋದು ಸೇರಿದಂತೆ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ, ಈ ರೀತಿಯ ಘಟನೆಗಳನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲಾಡಳಿತ, ಸರ್ಕಾರಿ ಆಸ್ಪತ್ರೆಯಲ್ಲಿ ಅಂತಹ ಮಕ್ಕಳನ್ನು ಇಟ್ಟು ಹೋಗಲೆಂದೇ ಒಂದು ಕೊಠಡಿಯನ್ನು ನಿರ್ಮಿಸಿದೆ. ಈ ಮೂಲಕ ಕಳೆದ 1 ತಿಂಗಳಲ್ಲಿ 5 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply